MENU

Fun & Interesting

ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ || ಕನ್ನಡ ಭಜನೆ ಪದಗಳು || Om sri guru sidda || Kannada bhajane song's

Video Not Working? Fix It Now

#bhajan #folk #song #kannadafolksongs #ಅಯ್ಯಪ್ಪ , ಹೊಸಳ್ಳಿ , ಯಾದಗಿರಿ ಅವರು ಈ ಪದ ಹಾಡಿರುವರು ನಮ್ಮ ಎಲ್ಲಾ ಕೇಳುಗರ ಪರವಾಗಿ ಅವರಿಗೆ ಅಭಿನಂದನೆಗಳು ಸಲ್ಲುವವು #ಭಜನಾಪದಗಳು #bhajanapada #ಅಯ್ಯಪ್ಪಣ್ಣಹೊಸಳ್ಳಿ #ayyappahosalli #tatvapadagalu #kannada #ಶ್ರೀ ಗುರು ಸುಕ್ಷೇತ್ರಕ್ಕಿಂದು  ಹೋಗಿ ಯಾತ್ರೆಯ ಮಾಡಿ ಬಂದೆ  ಶ್ರೀ ಗುರು ನಮ್ಮ ಶರೀರ ದೋಳುಂಟು  | ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ ಮರ್ಮ ಬೇರುಂಟು | ಆರು ಬೆಟ್ಟಗಳೇರಿ ನಡೆದೆ  ಮೂರು ಕೊಳ್ಳುವ ಮೂಲಕ್ಕಿಳಿದೆ  ಏರಿ ನೋಡು  ಕೈಲಾಸದ್ವಾರಗಳು |ಓಂ ಶ್ರೀ ಗುರು ಸಿದ್ದ ಸಾರಬಡಗಲ ಗುಡಿಯ ಕಂಡೆನಾ| ಏಳಸುತ್ತಿನ ಕೋಟೆಯೊಳಗೆ  ಮೇಲುಗುಪ್ಪರ ಗಿರಿಗಳ ನಡುವೆ  ತಾಳ ಮದ್ದಲೆ ಗಂಟೆಗಳುಮೊಳಗಿ |ಓಂಶ್ರೀ ಗುರು ಸಿದ್ದ ವೇಳೆ ವೇಳೆಗೆ ತಾವೇ ನುಡಿದಾವೋ| ಒಂಬತ್ತು ಬಾಗಿಲದೋಳು  ಇಂಬಲಾದವು ಬೀದಿ ನಾಲ್ಕು  ತುಂಬಿ ಸೋಸುವ ಕೊಳ್ಳಗಳೆಂಟು |ಓಂ ಶ್ರೀ ಗುರು ಸಿದ್ದ ಕಂಭವೆರಡು ಶಿಖರವೊಂದುಂಟು| ಪಾತಳ ಗಂಗೆಯೊಳು ಮಿಂದು  ಹೋತ ಶಿಖರೇಶ್ವರನಿಗೇರಿ  ಜೋತಿರ್ಲಿಂಗಕ ದೃಷ್ಟಿ ಹೂಡಿದೆನು |ಓಂ ಶ್ರೀ ಗುರು ಸಿದ್ದ ಜೋತಿರ್ಲಿಂಗವು ಕರದೊಳು ಕಾಣಿಸಿತು.| ಬರುವ ಕೋಣಗಳೆಂಟು ಬಡದೆ  ಇರಿಯ ಹುಲಿಗಳನಾರು ತಡದೆ  ಮೆರೆವ ಸರ್ಪಗಳೆಡೆಯ ಮೆಟ್ಟಿದೆನು |ಓಂ ಶ್ರೀ ಗುರು ಸಿದ್ದ ಸರ್ಪಕಪಿಯನು ಇಡಿದು ಕಟ್ಟಿದೆನು| ಇಂದ್ರ ದಿಕ್ಕಿನೊಳಿರುವ ಸೂರ್ಯ  ಚಂದ್ರದಿಕ್ಕಿನ ಪುರದೊಳು ಮುಳಗಿ  ಅಂದ ಚಂದದ ಬೆಳಕ ತೋರಿದನು |ಓಂ ಶ್ರೀ ಗುರು ಸಿದ್ದ ಹಿಂದ ನೋಡಲು ಬಯಲಿಗೆ ಬಯಲಂದ | ಸಪ್ತ ಸಾಗರ ನದಿಯ ದಾಟಿ  ಗುಪ್ತ ಕದದೊಳು ಬನದಲಿ ಸುಳಿದು  ನಿತ್ಯ ಗುಡಿಯೊಳು ಗೋಪುರ ಹೊಕ್ಕೇನು |ಓಂ ಶ್ರೀ ಗುರು ಸಿದ್ದ ಸಪ್ತ ವರ್ಣದ ಲಿಂಗ ಕಂಡೆನು| ಇರಿಯ ಶಿಖರದ ಅಗ್ನಿ ಮುಖದೊಳು  ಅರಿತು ಅಡಕೇಶ್ವರನ ಕೇಳಿ  ಜೋತಿರ್ಲಿಂಗಕ್ಕೆ ದೃಷ್ಟಿ ಗೊಂಡೇನು  | ಓಂ ಶ್ರೀ ಗುರು ಸಿದ್ದ ಅರ್ಥ ಸೇವಿಸಿ ಮರಣವಿಲ್ಲೆಂದ|   ಇಂಥ ಶ್ರೀ ಶೈಲ ಗನವದೊಳಗ  ಬ್ರಾಂತಿಗೆಟ್ಟು ತಿರುಗಿ ನೋಡಲು  ಅಂತರಂಗದ ಗುಡಿಯ ಕಂಡೇನು |ಓಂ ಶ್ರೀ ಗುರು ಸಿದ್ದ ಶಾಂತಮಲ್ಲಯ ತಾನೇ ಆಗಿದನು|

Comment