ವರ್ಷದ ಆರಂಭದಲ್ಲಿ ಎಲ್ಲರೂ ವರ್ಷಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಾರೆ. ಈ ವರ್ಷ ಅವರ ಜೀವನದಲ್ಲಿ ಏನು ಬದಲಾವಣೆಗಳಾಗುತ್ತವೆ? ಏನು ಒಳ್ಳೆಯದಾಗುತ್ತದೆ ಎಂದು ತಿಳಿಯಲು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ನಮ್ಮ ಬಗ್ಗೆ ನಮಗಿಂತ ಜ್ಯೋತಿಷಿಗೆ ತಿಳಿದಿರಲು ಸಾಧ್ಯವೇ? ನಮ್ಮ ಭವಿಷ್ಯವನ್ನು ನಾವೇ ರೂಪಿಸಲು, ತಿದ್ದಲು ಸಾಧ್ಯ. ನಮ್ಮ ಪರಿವರ್ತನೆಯಾಗದೆ ಯಾವ ಜ್ಯೋತಿಷಿಯ ಮಾತು ಕೇಳಿ ವ್ಯರ್ಥ. ಇನ್ನೊಬ್ಬರನ್ನು ನಂಬುತ್ತೇವೆಂದರೆ ಭಗವಂತ ನಮಗೆ ಕೊಟ್ಟ ದೇಹ ಬುದ್ಧಿಗಳನ್ನು ನಾವು ನಂಬುತ್ತಿಲ್ಲವೆಂದು ಅರ್ಥವಲ್ಲವೇ? ತನ್ನನ್ನು ತಾನು ತಿಳಿದರೆ ಅವರವರ ಜ್ಯೋತಿಷ್ಯ ಅವರೇ ತಿಳಿದುಕೊಳ್ಳಲು ಸಾಧ್ಯ. ಜ್ಯೋತಿಷ್ಯದ ಬಗ್ಗೆ ಇನ್ನಷ್ಟು ವಿಚಾರಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರ ಅಮೃತವಾಣಿಯಲ್ಲಿ ಕೇಳಿರಿ.