ಧಾರವಾಡದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವಿಚ್ಚೇದನ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಇಬ್ಬರು ನ್ಯಾಯಾಧೀಶರು, ಕೋರ್ಟ್ನ ಕಟಕಟೆಯ ಬಳಿ ನಿಂತ ಕಕ್ಷಿದಾರ ಮಹಿಳೆಗೆ ಖಡಕ್ ಆಗಿ ವಾರ್ನ್ ಮಾಡಿದ್ದು ಗಮನಾರ್ಹವಾಗಿತ್ತು. ನಿಮಗೆ ಸೊಸೆ-ಮೊಮ್ಮಗು ಬೇಡ ಎನ್ನುವುದಾದರೆ ಅವರಿಗೆ ಹತ್ತು ಲಕ್ಷ ರೂ. ಜೀವನಾಂಶವನ್ನು ಕೊಡಿ. ಇಲ್ಲವೆಂದರೆ ನೀವೆಲ್ಲ ಕಾನೂನು ಪ್ರಕಾರ ಜೈಲಿಗೆ ಹೋಗಬೇಕಾಗುತ್ತೆ ಎಂದು ಓಪನ್ ಕೋರ್ಟ್ನಲ್ಲಿ ಜಡ್ಜ್ ಹೇಳಿದಾಗ ಲಾಯರ್ ಸೇರಿದಂತೆ ಕಕ್ಷಿದಾರಳು ಕಕ್ಕಾಬಿಕ್ಕಿಯಾದಂತಿತ್ತು!