ಗುರು ಗರ್ಗಾಚಾರ್ಯರು ದೇವರ್ಷಿ ನಾರದರು ಹೇಳಿದ ಮಾತನ್ನು ಕೃಷ್ಣನಿಗೆ ಹೇಳಿದ್ದರು, ಕೃಷ್ಣ ನಿನ್ನ ಜೀವನ ರಾಧೆಗಾಗಿ ಮಾತ್ರವಲ್ಲ ನೀನು ಲೋಕ ಕಲ್ಯಾಣಕ್ಕಾಗಿ ಹುಟ್ಟಿದ್ದು ನಿನ್ನ ಬರುವಿಕೆಗಾಗಿ ವರ್ಷಗಳಿಂದ ಅದೆಷ್ಟೋ ಜೀವಗಳು ಕಾದಿವೆ ನಿರಾಶೆಮಾಡಬೇಡ ಎಂದು ಜೀವನ ಜವಾಬ್ದಾರಿ ನೆನಪಿಸಿದ್ದರು, ಈಗ ಕೃಷ್ಣ ನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿತ್ತು, ಅದು ರಾಧೆಯನ್ನು ಬಿಟ್ಟು ಲೋಕದ ಕಡೆ ನಡಿಬೇಕಾ ಅಥವಾ ಲೋಕವನ್ನು ಬಿಟ್ಟು ರಾಧೆ ಜೊತೆ ಇರಬೇಕಾ ಯೋಚಿಸಿದ ಕೃಷ್ಣ ತಾನು ಗೋವುಗಳೊಂದಿಗೆ ಸಮಯ ಕಳೆಯುತ್ತಿದ್ದ ಗೋವರ್ಧನ ಗಿರಿಗೆ ವಿಶ್ರಾಂತಿಗಾಗಿ ಬಂದ.