ಆಧ್ಯಾತ್ಮ, ಮಾಂಸಾಹಾರ ಮತ್ತು ಇಂದಿನ ಯುವ ಪೀಳಿಗೆ | ಅವಧೂತ ಶ್ರೀ ವಿನಯ್ ಗುರೂಜಿ
ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮ ಲೋಕದ ಅನುಭಾವಿ ನುಡಿಗಳು ನೂತನ ಶೈಲಿಯಲ್ಲಿ ನಿಮ್ಮ ಮುಂದೆ ಬರುತ್ತಿದೆ. ಸತ್ಯ ಬೆಳಕು ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರನಟ ಮಾಸ್ಟರ್ ಆನಂದ್ ಅವರ ನಿರೂಪಣೆಯೊಂದಿಗೆ ನಿಮ್ಮ ಮುಂದೆ ಬಂದಿದೆ.
ಕೃಷ್ಣ ಅಂದರೆ ಸರ್ವಜ್ಞ, ಸರ್ವ ಶಕ್ತ, ಮತ್ತು ಸರ್ವ ವ್ಯಾಪಿಯಾಗಿದ್ದಾನೆ. ಸನ್ಯಾಸಿತ್ವಕ್ಕೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವನೂ ಶ್ರೀ ಕೃಷ್ಣನೇ. ಕುಂಬಾರನ ಮನೆಯಲ್ಲಿ ಪಾಂಡುರಂಗ ಕೃಷ್ಣ ಕೆಲಸದವನಾಗಿ ಹೋದ. ಆದರೆ ಇತಿಹಾಸದಲ್ಲಿ ಅದರ ಬಗ್ಗೆ ಹೆಚ್ಚಿನ ಉಲ್ಲೇಖಗಳು ನಡೆದಿಲ್ಲ ಅನ್ನುವುದು ವಿಪರ್ಯಾಸ. ಯಾರು ಧರ್ಮವನ್ನು ಆಚರಣೆ ಮಾಡುತ್ತಾರೋ ಅವರಿಗೆ ಜ್ಞಾನ ವೃದ್ಧಿಸುತ್ತದೆ. ಜ್ಞಾನದಲ್ಲಿ ಧರ್ಮವೂ ಇಲ್ಲ, ಅಧರ್ಮವೂ ಇಲ್ಲ. ಅದೇ ರೀತಿ ಪಾಪ - ಪುಣ್ಯವೂ ಜ್ಞಾನದಲ್ಲಿ ಇಲ್ಲ.
ಅಹಂಕಾರ, ಮಮಕಾರ ಎರಡನ್ನೂ ಬಿಟ್ಟು ಬದುಕುವುದೇ ಆಧ್ಯಾತ್ಮದ ಲಕ್ಷಣ. ಆಧ್ಯಾತ್ಮದಲ್ಲಿ ಹೆಣ್ಣಿಗೆ ಯಾವ ಕೆಲಸವೂ ಅಡ್ಡಿಯಲ್ಲ. ಹಿಂದೂಗಳಿಗೆ ದೇವಸ್ಥಾನ, ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚು ಇದ್ದರೆ, ಮನುಷ್ಯರಿಗೆ ಮನುಷ್ಯತ್ವದ ಜಾಗ ಅನ್ನೋದೇ ಅವಧೂತ ಮಾರ್ಗ. ಜಾತಿ, ಧರ್ಮಗಳಿಗಿಂತ ಮನುಷ್ಯತ್ವಕ್ಕೆ ಬೆಲೆ ಕೊಡುವುದೇ ಅವಧೂತ ಹಾದಿ. ಆಧ್ಯಾತ್ಮ ಹಾಗೂ ಸಂತ ಪರಂಪರೆಗೆ ಇಂತಹದ್ದೇ ಆಹಾರ ಕ್ರಮ ಇರಬೇಕೆಂದಿಲ್ಲ. ಎಲ್ಲಾ ದೈವತ್ವಗಳಿಗಿಂತಲೂ ಮನುಷ್ಯತ್ವ ಮುಖ್ಯ. ಎಲ್ಲಾ ಧರ್ಮಗಳ ಮೂಲ ತತ್ವವೂ ಮನುಷ್ಯತ್ವ.
ಪ್ರತಿಯೊಬ್ಬರೂ ಅವರವರ ದಾರಿಯಲ್ಲಿ ಶ್ರೇಷ್ಟರು. ಹಾಗಿದ್ದ ಮಾತ್ರಕ್ಕೆ ಇನ್ನೊಬ್ಬರ ಬಗ್ಗೆ ಟೀಕೆ ಮಾಡುವುದಲ್ಲ. ಅದರ ಬದಲು ಪ್ರಾಯೋಗಿಕವಾಗಿ ಬದುಕಿ ತೋರಿಸಬೇಕು. ಇಂದಿನ ಯುವ ಪೀಳಿಗೆ ತಮ್ಮಲ್ಲಿ ಮಾನವೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಅವರವರ ಜಾತಿ, ಕಸುಬುಗಳನ್ನು ನೋಡುವುದನ್ನು ಬಿಟ್ಟು ಅವರಲ್ಲಿನ ಮನುಷ್ಯತ್ವವನ್ನು ನೋಡಬೇಕು. ವಿವೇಕದಿಂದ ಬದುಕುವ ಚಿಂತನಾಶೀಲ ಲೌಕಿಕವೇ ಪಾರಮಾರ್ಥಕ ಎಂಬುವುದನ್ನು ನಾವು ನಂಬಬೇಕು.
For More Videos:
ಮೂಲ ಆಧ್ಯಾತ್ಮ ಎಂದರೆ ಏನು? https://youtu.be/LY8B3fM1njQ
ಆತ್ಮ ಮೋಕ್ಷಕ್ಕೆ ಹೋಗಬೇಕಾದ್ರೆ ಕೇಳೋದು ಇದೇ | This is what Soul hears while enrooting to Moksha https://youtu.be/0b9n5eMbbxQ
ದೇವರು ನಮಗೆ ಈ ರೂಪಗಳಲ್ಲಿ ಕಾಣಿಸುತ್ತಾರೆ | God can be seen in these formats https://youtu.be/gOMu4PyE2RY
ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣೆ https://youtu.be/T98OJQ_NuW0
ಜಪ ಮಾಡುವುದು ಹೇಗೆ ಗೊತ್ತಾ? https://youtu.be/4gJLsZ_h69g
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality