MENU

Fun & Interesting

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೌರ ಯುಗಾದಿಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಗೀತೋಪದೇಶ ಅಲಂಕಾರವನ್ನು

SRI PUTHIGE UDUPI 4,227 10 months ago
Video Not Working? Fix It Now

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಸೌರ ಯುಗಾದಿಯ ಪ್ರಯುಕ್ತ ಶ್ರೀ ಕೃಷ್ಣನಿಗೆ ಗೀತೋಪದೇಶ ಅಲಂಕಾರವನ್ನು ಪುತ್ತಿಗೆ ಕಿರಿಯ ಶ್ರೀಪಾದರು ಮಾಡಿದರು. ನಂತರ ಪುತ್ತಿಗೆ ಹಿರಿಯ ಶ್ರೀಪಾದರು ಮಹಾ ಪೂಜೆಯನ್ನು ಮಾಡಿದರು. ಸೌರ ಯುಗಾದಿಯ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಚಿನ್ನದ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನಡೆಯಿತು.ಈ ಸಂದರ್ಭ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ ಎಂಬ ವಿಷಯದ ಬಗ್ಗೆ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಪ್ರವಚನ ಮಂಗಳ ನಡೆಸಿದರು. ನಂತರ ಪರ್ಯಾಯ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಇವರು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣ ನಡೆಸಿದರು. ಪರ್ಯಾಯ ಶ್ರೀ ಪಾದರು ನೂತನ ಸಂವತ್ಸರದಲ್ಲಿ ಆಶೀರ್ವಚನ ನೀಡಿ ಹರಸಿದರು.

Comment