ಈ ಪ್ರವಚನ ಸರಣಿಯಲ್ಲಿ, ಪ್ರೊ. ಪಿ. ಆರ್. ಮುಕುಂದ್ ಅವರು ಪ್ರಾಣ ತತ್ತ್ವದ ಕುರಿತು ತಮ್ಮ ಅಪೂರ್ವ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಯಾರು ಈ ಮುಖ್ಯಪ್ರಾಣ? ಅನಂತನಾದ ಭಗವಂತ ಮತ್ತು ಅನಂತ ಜೀವರ ಸಂಬಂಧ, ಜೀವ ಮತ್ತು ಜೀವೇಶ್ವರನ ನಡುವೆ ಸೇತುವೆಯಾಗಿ ಮುಖ್ಯಪ್ರಾಣನ ಪಾತ್ರ,
ಒಂದೇ ನಾಣ್ಯದ ಎರಡು ಮುಖದಂತಿರುವ ವಿಶ್ವದಲ್ಲಿ ತುಂಬಿರುವ ಎರಡು ಮಹತ್ ತತ್ತ್ವಗಳಾದ ಬ್ರಹ್ಮ-ವಾಯುಗಳ ಸಂಬಂಧದ ಬಗ್ಗೆ ರೋಚಕವಾದ ಸತ್ಯವನ್ನ ಬೆಳಕಿಗೆ ತಂದಿದ್ದಾರೆ.
"ಸಂಖ್ಯೆಗಳಲ್ಲಿ ಸಮಾನತೆಯಿಲ್ಲ, ಆದರೆ ಮಾನ್ಯತೆ ಒಂದೇ!"
ಕೊನೆಯಿರದ ಸಂಖ್ಯಾಸರಣಿಯ ಮೂಲಕ ಮುಖ್ಯಪ್ರಾಣನ ಮಹಿಮೆಯನ್ನು, ಮಹದುಪಕಾರವನ್ನು, ಶ್ರೀ ಮುಕುಂದ ಅವರು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಗನ್ನಡದಲ್ಲಿ
ತಿಳಿಸಿದ್ದಾರೆ.
ಭಗವತ್ಭಕ್ತರಿಗೆ ಇಲ್ಲಿದೆ ಅಧ್ಯಾತ್ಮದ ರಸಾಯನ. ಬನ್ನಿ ಸವಿಯೋಣ.