ಬಬಲಾದಿ ಮಠದ ಕಾಲಜ್ಞಾನ ಭವಿಷ್ಯ: ಭಯೋತ್ಪಾದನೆ, ನೈಸರ್ಗಿಕ ವಿಕೋಪದ ಹೊಸ ಸುಳಿವು ತಿಳಿಯದಣ್ಣಾ! | Vijay Karnataka
ಕಾಲಜ್ಞಾನ ಭವಿಷ್ಯ ನುಡಿಯಿಂದಾಗಿ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಬಬಲಾದಿಯ ಚಂದ್ರಗಿರಿ ಸದಾಶಿವ ಮುತ್ಯಾರ ಮಠದಲ್ಲಿ 2024ನೇ ಸಾಲಿನ ಭವಿಷ್ಯವಾಣಿ ಹೊರಬಂದಿದೆ. ಮಠದ ಸಿದ್ದರಾಮಯ್ಯ ಹೊಳಿಮಠ ಸ್ವಾಮೀಜಿ ಅವರು ಕಾಲಜ್ಞಾನವನ್ನು ಓದಿ ತಿಳಿಸಿದ್ದಾರೆ. ಬಬಲಾದಿ ಚಂದ್ರಗಿರಿ ಸದಾಶಿವ ಮುತ್ಯಾರ ಜಾತ್ರಾ ಸಮಯದಲ್ಲಿ ಕಾಲಜ್ಞಾನ ಭವಿಷ್ಯ ಹೇಳಲಾಗುತ್ತದೆ. ಈ ಮಠದಲ್ಲಿ ನುಡಿಯುವ ಕಾಲಜ್ಞಾನ ಭವಿಷ್ಯ ಸುಳ್ಳಾಗಿಲ್ಲಾ ಎಂಬ ಪ್ರತೀತಿ ಇದೆ. ಕಾಲಜ್ಞಾನ ವಿವರಿಸಿದ ಸಿದ್ದರಾಮಯ್ಯ ಹೊಳಿಮಠ ಸ್ವಾಮೀಜಿ, ''ಕ್ರೋಧಿನಾಮ ಸಂವತ್ಸರದಲ್ಲಿ ಅತಿ ಸಿಟ್ಟಿನವರು ಹೆಚ್ಚಾಗುತ್ತಾರೆ. ಕೀಟ ಬಾಧೆ, ಕೀಟ ಹೆಚ್ಚಾಗುತ್ತದೆ. ಸಾಧಾರಣೆ ಮಳೆಯಿರುತ್ತದೆ ಹಾಗೂ ವ್ಯಾಪಾರಸ್ಥರಿಗೆ ಮಧ್ಯಮ ಫಲಗಳು ಸಿಗುತ್ತವೆ. ಬೆಳೆಯು ಖಂಡ ಮಂಡಲವಾಗುತ್ತವೆ. ಇದರೊಂದಿಗೆ ಶಿಶುಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತವೆ'' ಎಂದು ಹೇಳಿದ್ದಾರೆ.
Baleshwara Babaladi Sadashiva Mutya Mutt Jatre Kalajnana Bhavishyavani 2024 Political Situation Health Effects
#vijaypura #babalaadi #baleshwar Baleshwara Babaladi Sadashiva Mutya Mutt
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka
Our Video Website: https://kannada.timesxp.com/