MENU

Fun & Interesting

ಸತ್ತ ದಿನವೇ ನಟಿ ಅಶ್ವಿತಿ - ಅದ್ವಿತಿ ಶೆಟ್ಟಿ ಮನೆಯಲ್ಲಿ ಅಪ್ಪನ ಆತ್ಮ ಓಡಾಟ!?| Rajesh Reveals special

Rajesh Gowda 96,085 12 hours ago
Video Not Working? Fix It Now

#therajeshreavels #rajeshgowda #rajeshreveals #rjrajesh #advithishetty #ashwithishetty ಸ್ಯಾಂಡಲ್‌ವುಡ್‌ನ ಜನಪ್ರಿಯ ಅವಳಿ ಸಹೋದರಿಯರಾದ ನಟಿ ಅಶ್ವಿತಿ ಮತ್ತು ಅದ್ವಿತಿ ಶೆಟ್ಟಿ ವರ್ಷದ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡರು. ತಂದೆಯ ಸಾವಿನ ದಿನ ಅಪ್ಪನ ಆತ್ಮ ಕಾಣಿಸಿಕೊಂಡಿರುವುದರ ಬಗ್ಗೆ ಇದೀಗ ಅಚ್ಚರಿಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ, “ಅಪ್ಪ ತೀರಿಕೊಂಡ ದಿನ ನಾವು ಅವರ ಆತ್ಮವನ್ನು ನೋಡಿದ್ವಿ. ಅಪ್ಪ ಸತ್ತಾಗ ಅವರ ಫೇವರೇಟ್‌ ಕುರ್ಚಿ ಇತ್ತು ಮನೆಯಲ್ಲಿ ಅದರಲ್ಲಿ ಕೂರಿಸಿದ್ವಿ. ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರ್‌ನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು. ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತುಕೊಂಡಿದ್ದಾಗ, ಯಾರೋ ಕಿಚನ್‌ ಒಳಗೆ ಹೋದಂತೆ ಆಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ. ಅವರು ಸತ್ತಾಗ ಧರಿಸಿದ್ದ ಅದೇ ಪಂಚೆ ಮತ್ತು ಶರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ, ಅದೇ ರೀತಿ ಅವರ ನೆರಳನ್ನು ನೋಡಿದ್ವಿ. ಅದನ್ನ ನೆನೆಸಿಕೊಂಡರೆ ಇಂದಿಗೂ ಭಯ ಆಗುತ್ತೆ” ಸತ್ತ ಮೇಲೂ ಅಪ್ಪನ ಪೌಡರ್‌ ವಾಸನೆ ಬರುತ್ತಿತ್ತು “ಅವತ್ತು ಎಲ್ಲರೂ ನಾರ್ಮಲ್‌ ಆಗಿ ಮಾತನಾಡುತ್ತಾ ಕೂತಿದ್ದರು. ನಾವು ಗಾಬರಿಯಲ್ಲಿ ಫುಲ್‌ ಸೈಲೆಂಟ್‌ ಆಗಿ ಕೂತಿದ್ವಿ. ನಂತರ ಮೊದಲು ಹೋಗಿ ಆ ಚೇರ್‌ ಯಾರು ಅಡುಗೆ ಮನೆಯಲ್ಲಿ ಇಟ್ಟಿದ್ದು ಎಂದು ಭಯದಲ್ಲಿ ಜೋರಾಗಿ ಕೂಗಾಡುತ್ತಿದ್ದೆ. ಎಲ್ಲರೂ ಇವಳಿಗೆ ಏನಾಯ್ತು ಅಂತ ವಿಚಿತ್ರವಾಗಿ ನೋಡುತ್ತಿದ್ದಾರೆ. ನಾನು ಆ ರಾತ್ರಿ ಯಾರಿಗೂ ಏನನ್ನೂ ಹೇಳಲಿಲ್ಲ. ಮರುದಿನ ಎಲ್ಲರಿಗೂ ಹೇಳಿದೆ ಅಪ್ಪನನ್ನು ನೋಡಿದೆ ಅಂತ. ಎಲ್ರೂ ಶಾಕ್‌ ಆಗಿದ್ದರು. ಅಪ್ಪ ತೀರಿಕೊಳ್ಳುವ ಮುಂಚೆ ಅವರು ಬಳಸುತ್ತಿದ್ದ ಪೌಡರ್‌ ವಾಸನೆ ಅವರು ಹೋದಮೇಲೆ ಆಗಾಗ ಬರುತ್ತಿತ್ತು. ಈ ರೀತಿ ತುಂಬಾ ಅನುಭವಗಳಾಗಿವೆ” ಎಂದು ಅಪ್ಪನ ಸಾವಿನ ಬಳಿಕ ಆದ ಅನುಭವವನ್ನು 'ರಾಜೇಶ್ ಗೌಡ' ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಬಿಚ್ಚಿಟ್ಟಿದ್ದಾರೆ. Welcome to #TheRajeshReavels podcast on YouTube. Every Podcast conversations are intellectually stimulating, profoundly insightful, and forward-thinking. We feature a diverse range of guests, from entrepreneurs to Sandalwood celebrities, and even sports personalities. The Rajesh Reveals Podcast is inspiring show where we unravel the success stories of the India’s most accomplished individuals and delve into their success mantras. Each interaction is not just a conversation, but an intense learning journey for our viewers. Stay tuned to #TheRajeshReavels for more untold stories For more such videos follow us ►Instagram :/ iam_rjrajesh/ ►FB: /rjrajesh ►Contact us: [email protected]

Comment