ಪರಮ ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಜೀ, ಸಂಸ್ಥಾನ ಶ್ರೀ ಗವಿಮಠ ಕೊಪ್ಪಳರವರ, ಉಮರಜ್ ನಗರದ ಕಾರ್ಯಕ್ರಮದಲ್ಲಿನ ಪ್ರವಚನ.
ಕೊಪಣಾದ್ರಿ ಭಕ್ತಿ ಶ್ರಧ್ದೆಗಳ ಸಹ್ಯಾದ್ರಿ, ಭಕ್ತ ಭಾವಪರವಶನಾಗುವ ಶಿವಸಾಯುಜ್ಯದ ಷಣ್ಮುದ್ರಿ. ಭಕ್ತಿ ಮುಕ್ತಿಯನ್ನೂ ಮೀರಿ ನಿಲ್ಲುವ ದೇವನಿಲಯ ಶ್ರೀ ಗವಿಮಠ. ಅನ್ನ, ಅರಿವು, ಆದ್ಯಾತ್ಮ ಅಂತ:ಕರಣಗಳ ಮೂಲಕ ನಾಡ ಸೇವೆಗೈಯುತ್ತ ನಾಡವರ ನಾಡಿ ಮಿಡಿತಗಳಿಗೆ ಸದಾ ಸ್ವಂದಿಸುವ ಶ್ರೀಮಠವಿದು.
ಶ್ರೀ ಗವಿಮಠ ಕಲ್ಲಿನಡಿಯ ಕೈಲಾಸವಾಗಿರುವ ಗವಿಮಠದ ಆಧಾರ ಸ್ತಂಭಗಳು ಎರಡು. ಒಂದು ಹಿಂದಿನ ಎಲ್ಲ ಪೂಜ್ಯ ಶ್ರೀಗಳವರ ತಪಶಕ್ತಿ, ಇನ್ನೊಂದು ಭಕ್ತರ ಭಕ್ತಿ.