MENU

Fun & Interesting

ಪ್ರಜ್ಞಾಳಿಗೆ ನಮ್ಮ ಕಡೇ ಇಂದ ಒಂದು ಸಣ್ಣ ಬಸುರಿ ಸಮ್ಮಾನ

Pooja Kishor 201,261 7 months ago
Video Not Working? Fix It Now

ಮಾನವ ಜನ್ಮ ದೊಡ್ಡದು. ಅದನ್ನು ಕಡೆಗಣಿಸಬೇಡಿರೋ ಹುಚ್ಚಪ್ಪಗಳಿರಾ’ ಎಂದು ಪುರಂದರದಾಸರು ಹೇಳಿದ್ದಾರೆ. ಹುಟ್ಟಿದ ನಂತರ ಸಾಯುವವರೆಗಿನ ಅವಧಿಯಲ್ಲಿ ಷೋಡಶ ಸಂಸ್ಕಾರಗಳನ್ನು ಮಾಡಲೇಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಹದಿನಾರು ಸಂಸ್ಕಾರಗಳನ್ನು ಮಾಡಲು ಅಸಾಧ್ಯವಾದರೂ ನಾಮಕರಣ, ಉಪನಯನ, ಸೀಮಂತ ಎಂಬ ಕೆಲವನ್ನಾದರೂ ಮಾಡಿಯೇ ತೀರುತ್ತಾರೆ. ಎಲ್ಲ ಶಾಸ್ತ್ರಗಳ ಪೈಕಿ “ಸೀಮಂತ’ ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧವನ್ನು ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಚೊಚ್ಚಲ ಕರುಳ ಕುಡಿಯನ್ನು ಗರ್ಭದಲ್ಲಿ ಹೊತ್ತ ಒಂದು ಹೆಣ್ಣು ಅದರ ಆಗಮನದ ನಿರೀಕ್ಷೆಯಲ್ಲಿ ಪುಳಕಿತಳಾಗಿರುವಂಥ ಸಂದರ್ಭದಲ್ಲಿ ನಡೆಸುವ ಶಾಸ್ತ್ರ. ಗರ್ಭ ಧರಿಸಿದ ಮೂರನೇ ತಿಂಗಳಲ್ಲಿ “ಪುಂಸವನ’, “ಅನವಲೋಭನ’ ಎಂಬ ಸಂಸ್ಕಾರಗಳನ್ನು ನಡೆಸಲಾಗುವುದು. ಈ ಕಾಲದಲ್ಲಿ ಹೆಣ್ಣಿಗೆ ಆಹಾರ ರುಚಿಸದಿರುವುದು, ವಾಂತಿಯಾಗುವುದು ಎಲ್ಲ ಸಾಮಾನ್ಯ. ಆಗ ಪುಣ್ಯಾಹ ಮಾಡಿ ನಾಂದಿದೇವತೆಗಳನ್ನು ಪ್ರಾರ್ಥಿಸಿ ಪ್ರಜಾಪತಿಗೆ ಚರುದ್ರವ್ಯ ಆಹುತಿ ನೀಡುತ್ತಾರೆ. ಬಳಿಕ ಪತಿಯು ಪತ್ನಿಯ ಅಂಗೈಗೆ ಎರಡು ಉದ್ದಿನಕಾಳು, ಒಂದು ಗೋಧಿಯನ್ನು ಇಡಬೇಕು. ಅವಳು ಕಡೆದ ಮಜ್ಜಿಗೆಯೊಂದಿಗೆ ಪ್ರಾಶನ ಮಾಡಬೇಕು. ಶಾಸ್ತ್ರದ ಪ್ರಕಾರ ಉದ್ದು ಅಂಡದ ರೂಪವಾದರೆ, ಗೋಧಿ ಲಿಂಗರೂಪದ ಸಂಕೇತ. ಬಳಿಕ ದುಷ್ಟ ಶಕ್ತಿಯನ್ನು ನಿವಾರಿಸಲು ಅಶ್ವಗಂಧದ ರಸವನ್ನು ಪತ್ನಿಯ ಬಲ ಮೂಗಿಗೆ ಹಾಕಬೇಕು. ಇದರ ಉದ್ದೇಶ ಗರ್ಭಪಾತವನ್ನು ತಡೆಯುವುದು. ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದನ್ನು “ಬಳೆ ತೊಡಿಸುವುದು’ ಎಂದು ಕರೆಯುತ್ತಾರೆ.

Comment