MENU

Fun & Interesting

ಭವರೋಗ ವೈದ್ಯರಾದ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಕ್ಷೇತ್ರ | ವಿಜಯಪುರ |Sri Rukmanga Pandit Temple |Vijayapura

PURANIK VLOGS 3,421 1 day ago
Video Not Working? Fix It Now

ಭವರೋ ವೈದ್ಯರಾದ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಕ್ಷೇತ್ರ | ವಿಜಯಪುರ | ಬಿಜಾಪುರ | Sri Rukmanga Pandit Temple | Vijayapura | Bijapur location - https://maps.app.goo.gl/bNtB7BC6187iWxd29 ಭವರೋಗ ವೈದ್ಯರು ರುಕ್ಮಾಂಗದ ಪಂಡಿತರು ಬಿಜಾಪುರ ಆದಿಲ್ ಶಾಹಿ ಸುಲ್ತಾನರ ಸುಲ್ತಾನರ ಆಸ್ತಾನದಲ್ಲಿ ವೈದ್ಯರಾಗಿದ್ದ ಕೃಷ್ಣ ಪಂಡಿತರಿಗೆ ಪುತ್ರ ಸಂತಾನವಿರಲಿಲ್ಲ. ಅವರು ಹಂಪೆಯ ಗೌರಾನಂದ ಸ್ವಾಮಿಗಳಲ್ಲಿ ಪುತ್ರಸಂತಾನದ ತಮ್ಮ ಅಭಿಲಾಷೆ ಹೇಳಿಕೊಂಡಾಗವ ಗೌರಾನಂದರು ಲೋಕೋದ್ಧಾರಕ ಪುತ್ರ ಜನಿಸುತ್ತಾನೆಂದು ಕೃಷ್ಣ ಪಂಡಿತ ದಂಪತಿಗಳಿಗೆ ಆರ್ಶೀದಿಸುತ್ತಾರೆ. ಇದಾದ ಕೆಲದಿನಗಳಲ್ಲಿ ಕೃಷ್ಣ ಪಂಡಿತರ ಪತ್ನಿ ರುಕ್ಮಿಣಿಬಾಯಿ ಗರ್ಭವತಿಯಾಗುತ್ತಾರೆ. ಕ್ರಿ.ಶ ೧೯೧೦(ಊಹಿಸಲಾಗಿದೆ) ರಲ್ಲಿ ಕೃಷ್ಣ ಪಂಡಿತ ದಂಪತಿಗಳಿಗೆ ಪುತ್ರ ಸಂತಾನವಾಗುತ್ತದೆ , ಆ ಪುತ್ರ ರತ್ನವೇ ಭವರೋಗ ತಜ್ಞರೆಂದು ಖ್ಯಾತರಾದ ರುಕ್ಮಾಂಗದ ಪಂಡಿತರು. ಬಾಲ್ಯದಲ್ಲಿ ರುಕ್ಮಾಂಗದರು ತುಂಬಾ ತುಂಟರಾಗಿದ್ದರು , ಆಟೋಟಗಳಲ್ಲಿ ಹೆಚ್ಚಿನ ಆಸಕ್ತಿ ಅವರಿಗಿತ್ತು. ತಂದೆ-ತಾಯಿಗಳ ಬಾಲ್ಯದಲ್ಲಿಯೇ ಕಳೆದುಕೊಂಡು ಅಕ್ಕ ಭಾಗೀರಥಿ ಆಶ್ರಯದಲ್ಲಿ ಬೆಳಯುತ್ತಾರೆ. ಉಪನಯನವಾದರೂ ತಮ್ಮನಲ್ಲಿ ಯಾವುದೇ ಬದಲಾವಣೆ ಕಾಣದೇ ಇದ್ದಾಗ ಅಕ್ಕ ಭಾಗೀರತಿಗೆ ಆತಂಕವಾಗುತ್ತದೆ. ಪ್ರವಾಸದಲ್ಲಿ ಒಮ್ಮೆ ಗೌರಾನಂದರು ವಿಜಯಪುರಿಗೆ ಬರುತ್ತಾರೆ. ಆಗ ಅವರಲ್ಲಿ ತನ್ನ ತಮ್ಮನ ಬಗ್ಗೆ ಆತಂಕವನ್ನು ಹೇಳಿಕೊಳ್ಳಲು , ಗೌರಾನಂದರು ಸ್ವಾಮಿಜಿ ಬಾಲಕನ ಮುಖಲಕ್ಷಣ, ಕಾಂತಿಯುತ ಕಣ್ಣಿಗಳ ನೋಡಿ "ಭಯಪಡಬೇಡ ಇತ ಆಧ್ಯಾತ್ಮಿಕ ಸಾಧನನಾಗುತ್ತಾನೆ"ಹೇಳಿ ರುಕ್ಮಾಂಗದರಿಗೆ ಜ್ಞಾನೋಪದೇಶ ಮಾಡುತ್ತಾರೆ. ಅಲ್ಲಿಂದ ರುಕ್ಮಾಂಗದರು ಆಧ್ಯಾತ್ಮಕ ಸಾದನೆ ಮಾಡುತ್ತಾನೆ. ಪಂಢರಪುರ ವಿಠ್ಠಲನ ಉಪಸಕರಾಗುತ್ತಾರೆ. ಇವರು ವಿಠ್ಠಲನನ್ನು ಸ್ತುತಿಸುವಾಗ ಬಾದಶಾ ನೇ ಮಾರುವೇಷದಲ್ಲಿ ಬಂದು ಹಾಡುಕೇಳಿದನೆಂಬ ಪ್ರತೀತಿ ಇದೆ. ರುಕ್ಮಾಂಗದರ ಸಂನ್ಯಾಸಾಶ್ರಮದ ಹೆಸರು ಶ್ರೀ ರುಚಿತಾನಂದ ಸರಸ್ವತಿಗಳು. ರುಕ್ಮಾಂಗದರು ಆದಿಲ್ ಶಾಹಿ ಸುಲ್ತಾನರ ಆಸ್ಥಾನದ ವೈದ್ಯರೂ ಆಗಿರುತ್ತಾರೆ. ವಿಜಯಪುರಿಗೆ ಪ್ಲೇಗ್ ಮಹಾಮಾರಿರೋಗ ಆಕ್ರಮಿಸಿದಾಗ ( ಇದು ಮಹಿಪತಿದಾಸರ ಜೀವನ ಚರಿತ್ರೆಯಲ್ಲು ಉಲ್ಲೇಖವಿದೆ) ಆಗ ಮಹಾಮಾರಿ ದೇವಿ ಸ್ಥಾಪಿಸಿ ಮಹಾಮಾರಿ ರೋಗದಿಂದ ವಿಜಯಪುರನ್ನು ರಕ್ಷಸಿದರೆಂದು ಹೇಳಲಾಗುತ್ತದೆ. ದೈವಭಕ್ತರು ಆಗಿದ್ದರು. ಸ್ವತಃ ಪಂಢರಪುರದ ವಿಠ್ಠಲನನ್ನೇ ತಾವಿರುವಲ್ಲಿ ಕರೆದು ಪೂಜಿಸುತ್ತಿದ್ದರು. ಒಂದಿನ ಪಂಢರಪುರದ ವಿಠ್ಠಲ ಪೂಜೆಗೆ ಬಂದಿರುವುದಿಲ್ಲ. ಕಾರಣ ತಿಳಿಯದೇ ಚಪಡಿಸುತ್ತಿದ್ದರು. ಇತ್ತ ಪಂಡರಪೂರದ ವಿಠ್ಠಲನು ತನ್ನ ಭಕ್ತನನ್ನು ಕರೆಸಿಕೊಳ್ಳುವ ಉದ್ದೇಶದಿಂದ ಜಲರೋಗದ ನಾಟಕವನ್ನೂ ಹೂಡಿದ್ದನು. ಸಂತ ತೂಕಾರಾಮರ ಸ್ವಪ್ನದಲ್ಲಿ “ತನಗೆ ಜಲರೋಗವಿದ್ದು ಗುಣಪಡಿಸುವ ವೈದ್ಯ ರುಕ್ಮಾಂದ ಪಂಡಿತರಾಗಿದ್ದು ಅವರು ವಿಜಪುರಿನಲ್ಲಿ ಇರುವರು ಎಂದಾದ , ತುಕಾರಾಮರು ರುಕ್ಮಾಂಗದರನ್ನು ಪಂಡರಪುರಕ್ಕೆ ಕರೆದುಡ ಬರುತ್ತಾರೆ. ಆಧ್ಯಾತ್ಮಕ ಶ್ರೇಷ್ಠರಿಬ್ಬರ ಸಮಾಗಮಕ್ಕೆ ಪಂಡರಪುರ ವಿಠ್ಠೋಬ ಸಾಕ್ಷಿಯಾಗುತ್ತಾನೆ. ನಾಭಿಯಿಂದ ಯಚ್ಛೇತ್ತವಾಗಿ ನೀರು ಸುರಿಯುತ್ತಿರುತ್ತದೆ, ಆಗ ರುಕ್ಮಾಂಗಾದ ಪರಿಮಳವನ್ನು ತೈದು ಕರಿ ಬುಕ್ಕಿಟ್ಟನ್ನು ಹೆಬ್ಬರಳಿನಿಂದ ವಿಠ್ಠಲನ ಹೊಕ್ಕಳಿಗೆ ಹಚ್ಚಿ ಮಂತ್ರಪಠಿಸುತ್ತಾರೆ. ವಿಠ್ಠಲ ಜಲರೋಗ ವಾಸಿಯಾಗುತ್ತದೆ. ಸಾಕ್ಷಾತ್ ವಿಠ್ಠಲನಿಗೆ ಉಪಚರಿಸುತ್ತಾರೆ. ವಿಠ್ಠೋಬನಿಗೆ ಭಾದಿಸುತ್ತಿದ್ದ ಜಲರೋಗ ವಾಸಿಯಾಗುತ್ತದೆ. ಅಂದಿನಿಂದ ರುಕ್ಮಾಂಗದರು ಭವರೋಗ ತಜ್ಞರೆಂದು ಕರೆಸಿಕೊಳ್ಳುತ್ತಾರೆ. ಕಾಶೀ ಪಂಡಿತರನ್ನು ವಾದದಲ್ಲಿ ಸೋಲಿಸಿದರೆಂದು ಘಟನಯೊಂದು ಜನಮಾನಸದಲ್ಲಿದೆ. ನೂರು ವರ್ಷಗಳ ಜೀವಿಸಿ ಧ್ಯಾತ್ಮದ ಜ್ಞಾನವೆರಗಿದ ರುಕ್ಮಾಂಗದ ಪಂಡಿತರು ಸಶರೀರವಾಗಿ ಸಮಾಧಿಯಾಗುತ್ತಾರೆ. ಪ್ರತಿವರ್ಷ ಪಾಲ್ಗುಂ ದ್ವಾದಶಿ ಹಾಗೂ ಚತುರ್ದಶಿಯಂದು ಆರಾಧನೆ ಜರಗುತ್ತದೆ. ಲೇಖನ- ಶ್ರೀರಂಗ ಪುರಾಣಿಕ Sri Rukmanga Pandit Samadhi Krishna Pandit, who was a physician in the court of the Adil Shahi Sultan of Bijapur, had no sons. When he expressed his desire for a son to Gaurananda Swami of Hampe, Gaurananda blessed the Krishna Pandit couple with the promise of a son who would save the world.A few days later, Krishna Pandit's wife Rukminibai became pregnant. In 1910 AD (presumably), the Krishna Pandit couple had a son, Ratna, who became the famous Bhavaroga expert of Rukmanga. Rukmangad was very mischievous in his childhood and was very interested in sports. He lost his parents in his childhood and grew up under the care of his elder sister Bhagirathi. When he did not see any change in him despite his upbringing, Bhagirathi became worried.Once during his journey, Gaurananda came to Vijayapuri. Then, to express his concern about his younger brother, Gaurananda, seeing the boy's face and shining eyes, gave a sermon to Rukmanga saying, "Don't be afraid, he will become a spiritual tool."From there, Rukmangad made spiritual progress. He became a devotee of Vitthala in Pandharpur. It is believed that while he was praising Vitthala, Badasha came in disguise and listened to his songs. The name of Rukmangad's hermitage was Sri Ruchitananda Saraswati. Article - Sriranga Puranika For Advertisements and Information Contact – [email protected] #ವಿಜಯಪುರ #ದೇವಸ್ಥಾನ #history #bijapur #ದೇವಸ್ಥಾನ #ಬಿಜಾಪುರ #ಇತಿಹಾಸ #ಕನ್ನಡ #ಕರ್ನಾಟಕ #ಕರ್ಕಾಟಕ #ಕರ್ನಾಟಕದ #ಚಾಲುಕ್ಯರ #ಚಾಲುಕ್ಯ #ದೇವಾಲಯ #vijayapura #vijaypur #bijapur #bijapurvlogs #bijapura #klyan #chalukya #chalukyas #temple #ancient #ancienthistory #ancienttemple #lordshiva #someshwara #kannadahistory #karnatakaturism #kannada A#knowledge #kannada #kannadavlogs #vlog #vloger #vlogger ##vlogging #vlogvideo #kannadavlogger #kannadavlogs #shivatemple #bijapurmerijaan #bijapurvlogs #bijapur #bijapura #information #informative #bijapurhistory #vijayapurhistory #sindagivlog ##vijayapurturism #bijapurturism #tourism #tourist #travel #trending #vijayapurtemple #bijapurtemple #badamichalukya #foodvlog #history #ancienttemples #ancienthistory #karnatakahistory #kannadahistory #vlogs #health #interview #travel #bijapurvlogs #bijapur #vijayapura #rukmangadasamadhivijayapura #bijapurahistory #vijayapurhistory #adilshahi #lordvitthal #vlog #ರುಕ್ಮಾಂಗದಪಂಡಿತರು #ದೇವಸ್ಥಾನ #ದೇವಾಲಯ #ವಿಠ್ಠಲ #vitthaltemple

Comment