MENU

Fun & Interesting

ನಿವೃತ್ತ ಪೊಲೀಸ್‌ ಭಾಸ್ಕರ್ ರಾವ್ ಬೆಂಗಳೂರು ದುರಂತದ ಬಗ್ಗೆ ಏನ್‌ ಹೇಳಿದ್ರು ನೋಡಿ | Vijay Karnataka

Video Not Working? Fix It Now

ಸಿದ್ದರಾಮಯ್ಯ ಒಬ್ಬ ಹೇಡಿ, ವೀಕ್, ಅಸಹಾಯಕ ಮುಖ್ಯಮಂತ್ರಿ : ನಿವೃತ್ತ ಪೊಲೀಸ್‌ ಭಾಸ್ಕರ್ ರಾವ್ | Retired Police Officer Bhaskar Rao’s Reaction on Bengaluru Stampede | #SiddaramaiahCriticism #BengaluruStampede #PoliceSuspension #BhaskerRao #IPLControversy #CongressLeadership #BhaskarRaoStatement

ಸಿದ್ದರಾಮಯ್ಯ ಒಬ್ಬ ಹೇಡಿ, ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ದರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ ಎಂದು ನಿವೃತ್ತ ಹಿರಿಯ ಪೊಲೀಸ್ ಆಧಿಕಾರಿ ಭಾಸ್ಕರ್ ರಾವ್ ಹೇಳಿದರು.ಮೈಸೂರಲ್ಲಿ ಮಾತನಾಡಿದ ಅವರು, ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಇದು ದಯಾನಂದ್ ಅವರಿಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆಯನ್ನು ಕಗ್ಗೊಲೆ‌ ಮಾಡಿದಂತೆ ಎಂದು ಹೇಳಿದರು. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ. ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆಯ ಮೇಲೆ ಕಳುಹಿಸಬಹುದಿತ್ತು. ಅದನ್ನು ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ. ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ. ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿಕೆ ಶಿವಕುಮಾರ್ ಹೋಗಿದ್ದೇನು, ಮುತ್ತಿಕ್ಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ. ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ದರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಯಾವುದೋ ಆಫ್ರಿಕಾ ದೇಶದಲ್ಲಿ ಹೆಣಗಳನ್ನು ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲೂ ಹೊತ್ತುಕೊಂಡು ಹೋಗಲಾಗಿದೆ ಎಂದು ಕಿಡಿಕಾರಿದರು.

Retired senior police officer Bhaskar Rao said Siddaramaiah is a weak, ineffective, and helpless Chief Minister. He added that during Siddaramaiah’s first term, he was quite strong, but now he has completely lost his strength.Speaking in Mysuru, he said that in this entire incident, Siddaramaiah, DK Shivakumar, and Parameshwar should be held responsible as the culprits. They are the ones at fault.He criticized that the central government’s law was misused to suspend IPS officers. This is not just a matter limited to Daya Anand, but it feels like the entire police department has been humiliated. Siddaramaiah has diminished the morale of the police force.He questioned how many more people will face action in this manner. The way Daya Anand was treated was very disgraceful. If they were angry with him, they could have transferred him or put him on compulsory leave, but suspending him was not right.Bhaskar Rao also said IPL is just a club tournament, not a state or national event. He questioned why DK Shivakumar attended, hugged, and held the flag. Does the Chief Minister not know all this?
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► https://youtube.com/@VijayKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5CUiNBVJl72lPtBZ0P
FACEBOOK ►https://www.facebook.com/vijaykarnataka
INSTAGRAM ► https://www.instagram.com/vijaykarnataka/
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Comment