ಆಂಜನೇಯ, ಗಣೇಶ, ರಾಮ, ಶಿವ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ರೂಪವೊಂದು ಮೂಡಿಬರುತ್ತದೆ. ಹಾಗೆಯೇ, ಶಿವ ಎಂದಾಕ್ಷಣ ಲಿಂಗದ ಕಲ್ಪನೆಯೂ ನಮ್ಮೊಳಗೆ ಅಚ್ಚೊತ್ತಿದೆ. ಇದು ಹೇಗೆ? ವೀರಶೈವ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ನಾವು, ನಿಜವಾಗಿಯೂ ವೀರಶೈವರಂತೆ ಬದುಕಬೇಕಾದ ರೀತಿ ಅರಿತಿದ್ದೇವಾ? ನಿಜಕ್ಕೂ ವೀರಶೈವ ಅಂದರೆ ಯಾರು?