MENU

Fun & Interesting

ಮೈದಾಳ ರಾಮ - 01 | ತಂಬೂರಿ ಕಥೆ | Maidala Rama | Malvalli M Mahadevaswamy Harikathe

Malavalli M Mahadevaswamy 451,366 2 years ago
Video Not Working? Fix It Now

#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy Watch Kannada Devotional Harikathe - Maidala Rama - 01 #Maidala Rama - A Folk Tale - ಮೈದಾಳ ರಾಮ Artist - Dr. M Mahadevaswamy Singer - M Mahadevaswamy & Team #mahadevaswamy Lyrics - M Mahadevaswamy, #mahadevaswamy Banner - Maheshwara Audio Company Producer - Maheshwara Audio Company Released Year - 2003 ಮೈದಾಳ ರಾಮ - ಜಾನಪದ ಶೈಲಿ ತಂಬೂರಿ ಕಥೆ - 01 ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು ಸಾಹಿತ್ಯ : ಎಂ. ಮಹದೇವಸ್ವಾಮಿ ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ ಬಿಡುಗಡೆ : 2003 ಕಥಾ ಸಾರಾಂಶ : ಭೀಮಾವತಿ ಪಟ್ಟಣದಲ್ಲಿ ಸೋಮಪ್ಪ ಮತ್ತು ಮಹದೇವಮ್ಮ ದಂಪತಿಗಳು ಸತ್ಯ ನಿಷ್ಠೆಯಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರಿಗೆ ಮಕ್ಕಳ ಸಂತಾನ ಇರುವುದಿಲ್ಲ. ಮಕ್ಕಳಿಲ್ಲದ ಇವರನ್ನು ಊರಿನವರು ಕಂಡಾಗಲೆಲ್ಲಾ ಜರಿದು ಮಾತನಾಡುತ್ತಿರುತ್ತಾರೆ. ಇದರಿಂದ ಮನನೊಂದ ದಂಪತಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆ. ಆಗ ಕೈಲಾಸದಿಂದ ಪರಶಿವನು ಜಂಗಮನಾಗಿ ಧರೆಗೆ ಬಂದು ಅವರಿಗೆ ಪುತ್ರ ಸಂತಾನವನ್ನು ನೀಡುತ್ತಾರೆ. ಆದರೆ ಮೈದಾಳರಾಮನು ತನ್ನ ಎಂಟನೇಯ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ. ಇದರಿಂದ ತಾಯಿ ಮತ್ತು ಮೈದಾಳರಾಮನು ಬಹಳ ಕಷ್ಟಕರವಾದ ಜೀವನ ನಡೆಸಬೇಕಾಗುತ್ತದೆ. ಒಮ್ಮೆ ಗುರುಕುಲದಲ್ಲಿ ಮೈದಾಳರಾಮನು ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ತನ್ನ ಸಹಪಾಠಿಗಳು ತಮ್ಮ ತಮ್ಮ ಒಡಹುಟ್ಟಿದ ಅಕ್ಕ ತಂಗಿಯರ ಹಬ್ಬಕ್ಕಾಗಿ ರಜೆ ಕೇಳುತ್ತಾರೆ. ಏಕಾಂಗಿಯಾದ ಮೈದಾಳರಾಮನು ಸಹ ಗುರುಗಳ ಬಳಿ ರಜೆ ಕೇಳಿದಾಗ ಸ್ನೇಹಿತರು ಅವನನ್ನು ಹೀಯಾಳಿಸುತ್ತಾರೆ. ಇದರಿಂದ ಮನನೊಂದ ಮೈದಾಳರಾಮನು ತನ್ನ ತಾಯಿಯ ಬಳಿ ಬಂದು ತನ್ನ ಅಕ್ಕ ತಂಗಿಯರ ಬಗ್ಗೆ ವಿಚಾರಿಸುತ್ತಾನೆ. ಆಗ ಮಹದೇವಮ್ಮನವರು ಶಿವ ಪಾರ್ವತಿಯರೇ ನಿನ್ನ ಅಕ್ಕ-ಭಾವ ಎಂದು ಹೇಳುತ್ತಾರೆ. ಹಾಗಾದರೆ ಅವರನ್ನೇ ಕರೆತಂದು ಹಬ್ಬ ಮಾಡಲು ಮೈದಾಳ ರಾಮನು ಕೈಲಾಸಕ್ಕೆ ಹೊರಡುತ್ತಾನೆ. ಆಗ ದಾರಿಯಲ್ಲಿ ಪಡುವ ಕಷ್ಟಗಳನ್ನು ಎದುರಿಸಿ ಶಿವ ಪಾರ್ವತಿಯನ್ನು ಕರೆತಂದು ಈಗ ನಾವೆಲ್ಲರೂ ಆಚರಿಸುತ್ತಿರುವ ಗೌರಿ ಹಬ್ಬಕ್ಕೆ ಕಾರಣಕರ್ತನಾಗುತ್ತಾನೆ. ಈ ಕಥೆಯನ್ನು ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ. #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ -------------------------------------------------------- Like - Share - Subscribe - Follow us on : https://www.youtube.com/channel/UC_WFR2LyKBJjilT4qWgONRg ------------------------------------------ Copyrights Reserved ℗ 2003 Maheshwara Audio Company

Comment