1965ರಲ್ಲಿ ಪಾತಾಳ ಮೋಹಿನಿ ಚಿತ್ರದಲ್ಲಿ ಮೂಡಿ ಬಂದ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಮಠದ ದೃಶ್ಯ. ಚಲನಚಿತ್ರದಲ್ಲಿ ಜಂಗಮರ ಸಲಹೆಯಂತೆ, ಪತಿಗೆ ತಗುಲಿದ ಶಾಪ ವಿಮೋಚನೆಗೆ ಅವನ ಪತ್ನಿ ಭೇಟಿ ನೀಡುವ 5 ಪುಣ್ಯ ಕ್ಷೇತ್ರದಲ್ಲಿ ನಮ್ಮ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠವು ಒಂದಾಗಿತ್ತು ಎನ್ನುವುದು ವಿಶೇಷ. ಈ ಹಳೆಯ ವೀಡಿಯೋ ತುಣುಕನ್ನು ಹುಡುಕಿ, ಡಿಜಿಟಲ್ ಆಗಿ ಬದಲಾಯಿಸಿ ಈಗಿನ ಎಲ್ಲ ಭಕ್ತರಿಗೂ 1965 ರ ಶ್ರೀ ಸಿದ್ಧಾರೂಢ ಮಠದ ದರ್ಶನ ಮಾಡಿಸಿದ ಸೇವಕರಿಗೆ ಧನ್ಯವಾದಗಳು.