ಈ ಪ್ರವಚನ ಸರಣಿಯಲ್ಲಿ, ಪ್ರೊ.ಪಿ.ಆರ್.ಮುಕುಂದ್ ಅವರು ಪ್ರಾಣತತ್ತ್ವದ ಕುರಿತು ತಮ್ಮ ಅಪೂರ್ವ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇದು ಈ ಸರಣಿಯ ಕೊನೆಯ ಕಾಣಿಕೆ.
ಭಗವಂತನ ಮಹಿಮೆ ಹೇಗೆ ಹೇಳಿ ಮುಗಿಯದೋ ಹಾಗೆಯೇ ಅವನ ಮುಖ್ಯ ಪ್ರತೀಕವಾದ ಮುಖ್ಯಪ್ರಾಣನದೂ ಮುಗಿಯದ ಮಹಿಮೆ.
ಪ್ರಜ್ಞೆ ಎಂದರೇನು, ಅದರ ಮಹತ್ವ ಹಾಗೂ ಮುಖ್ಯಪ್ರಾಣನು ಏಕೆ ಪೂರ್ಣಪ್ರಜ್ಞ ಎಂಬುದರ ಒಳನೋಟವನ್ನು
ಪ್ರೊ.ಪಿ.ಆರ್.ಮುಕುಂದ್ ಅವರು ತೆರೆದು ತೋರಿಸಿದ್ದಾರೆ.
ದಶಪ್ರಮತಿ ಎಂದು ವೇದವಿಖ್ಯಾತನಾದ ಮುಖ್ಯಪ್ರಾಣನ ಹತ್ತು ಗುಣಗಳಾದ ಜ್ಞಾನ, ಭಕ್ತಿ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಹಾಗೂ ಬಲಗಳನ್ನು ನಾವು ನಮ್ಮ ಮಟ್ಟಿಗೆ, ಹೇಗೆ
ರೂಢಿಸಿಕೊಳ್ಳಬೇಕೆಂಬುದರ ಬಗ್ಗೆ ಪ್ರೊ.ಪಿ.ಆರ್.ಮುಕುಂದ್ ಅವರು ಸ್ಫುಟವಾಗಿ ವಿವರಿಸಿ,
ಮುಖ್ಯಪ್ರಾಣನು ನಮಗೆ ಮಾಡುವ ಅನನ್ಯ ಕೃಪೆಯ ಬಿತ್ತರವನ್ನು ಇಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.