Scale : E
ರಾಗ : ಭೂಪ್ ಮಿಶ್ರ
ತಾಳ : ರೂಪಕ್
ಆಂಜನೇಯನೆ ಅಮರ ವಂದಿತ ಕಂಜನಾಭನ ದೂತನೆ || ಪ ||
ಮಂಜಿನೋಲಗದಂತೆ ಶರಧಿಯ ದಾಟಿದ ಮಹಾ ಧೀರನೆ || ಅ.ಪ ||
ಆಂಜನೇಯನೆ ನಿನ್ನ ಗುಣಗಳ ಪೊಗಳಲಳವೆ ಪ್ರಖ್ಯಾತನೆ
ಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ || ೧ ||
ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆ ಎನಿಸಿದೆ
ರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ || ೨ ||
ಸಿಂಧು ಹಾರಿದೆ ಶ್ರೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆ
ತಂದು ಮುದ್ರೆಯನಿತ್ತು ಮಾತೆಯ ಮನವ ಸಂತೋಷ ಪಡಿಸಿದೆ || ೩ ||
ಜನಕ ತನುಜೆಯ ಮನವ ಹರುಷಿಸಿ ವನವ ತಿದ್ತೀಡಾಡಿದೆ
ದನುಜರನ್ನು ಸದೆದು ಲಂಕೆಯ ಅನಲಾಗುಹುತಿ ಮಾಡಿದೆ || ೪ ||
ರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆ
ಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ || ೫ ||
ಭರದಿ ಬಂದು ರಾಮಪಾದಕ್ಕೆರಗಿ ಬಿನ್ನಹ ಮಾಡಿದೆ
ಉರಗಗಿರಿ ಹಯವದನನ ಪರಮ ಭಕ್ತನೆಂದೆನಿಸಿದೆ || ೬ ||