ಹರಿ-ಕಥೆ ಪಾಡ್‌ಕಾಸ್ಟ್‌ನಲ್ಲಿ ರಾಧಾಕೃಷ್ಣ ಅಡಿಗ
ಹಿರಿಯ ಪತ್ರಕರ್ತ ಹರೀಶ್ ನಾಗರಾಜು ಸಾರಥ್ಯದ ನ್ಯೂಸೋ ನ್ಯೂಸು ಚಾನೆಲ್‌ನಲ್ಲಿ ಹರಿ-ಕಥೆ ಎಂಬ ಪಾಡ್‌ಕಾಸ್ಟ್ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ.
ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.
ಈ ಬಾರಿ ಪಾಡ್‌ಕಾಸ್ಟ್ ಶೋದಲ್ಲಿ 60 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಬೆಂಗಳೂರಿನ ಅತ್ಯಂತ ಐಕಾನಿಕ್ ಹೊಟೇಲ್ ಈ ಬ್ರಾಹ್ಮಿನ್ಸ್ ಕಾಫಿ ಬಾರ್ ಮಾಲೀಕರಾದ ರಾಧಕೃಷ್ಣ ಅಡಿಗ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಪ್ರತಿದಿನ ಸಾವಿರಾರು ಗ್ರಾಹಕರಿಗೆ ರುಚಿಕರ ಹಾಗೂ ಆರೋಗ್ಯಕರವಾದ ಆಹಾರವನ್ನು ಒದಗಿಸುತ್ತಿರುವ ಬ್ರಾಹ್ಮಿನ್ಸ್ ಕಾಫಿ ಬಾರ್ ಆರಂಭದ ದಿನಗಳು ಕುರಿತು ಮಾಲೀಕರಾದ ರಾಧಕೃಷ್ಣ ಅಡಿಗ ಮಾತನಾಡಿದ್ದಾರೆ.
ಕಾಫಿ ಬಾರ್ ಆರಂಭದ ದಿನಗಳಿಂದ ಈವರೆಗೂ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು,ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಈ ಕಾಫಿ ಬಾರ್ ರುಚಿಯನ್ನು ಸವಿದಿದ್ದಾರೆ ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನ್ಯೂಸೋ ನ್ಯೂಸು ತಂಡದ ಹಂಚಿಕೊಂಡಿದ್ದಾರೆ.
#legacyofbrahminscoffeebar #cafebusiness #café #bangalorecafes #cafesuccess #entrepreneur #entrepreneurship #bangalore #brahminstyle #brahmincommunity #brahminscafe #newsonewsu #anchorharishnagaraju #harishnagaraju #coffee #coffeelover #coffeeinspiration #cafeandrestaurant #cafeandresto #brahminscoffeebarhistory #brahmincoffeebarowner #brahminscoffeebarhistory #adigas #radhakrishnadiga #adigashotel #brahmincoffeebar #cafebusinessplan #adigas #adigashotel