#eps #eps95 #epfo #eps95hikenews #eps95latestnewstoday #eps95pension_7500 #eps95pension_7500 #eps95news #eps95pension #epson #epstopik #epspanel #epsnewmodel #rpsc #eps #epfo_new_update_2023 #rpfsi2023 #epfl #tpfest #epfo_latest_news_2022 #epfo_latest_update #epfocurrentaffairs #epfonews #rpfconstable2024 #epfo_pension_news_today #epf #epfo_latest_update #epfo #elf #epfgov #eps #epfo #eps95 #epfo_latest_update #epfonews #eps95hikenews #epfo_latest_news_2022 #epf #epfo_pension_news_today
ಇಪಿಎಸ್ ಪಿಂಚಣಿದಾರರ 86ನೇ ಮಾಸಿಕ ಸಭೆ ಮಾರ್ಚ್ 02, 2025 ರಂದು ಲಾಲ್ ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಲಾಲ್ ಬಾಗ್ ಆವರಣದಲ್ಲಿ ವಾಯು ವಿಹಾರ ಮುಗಿಸಿ, ಅಧಿಕ ಸಂಖ್ಯೆಯ ಇಪಿಎಸ್ ನಿವೃತ್ತರು ನಿಗದಿತ ಸ್ಥಳಕ್ಕಾಗಮಿಸಿದ್ದು, ಎಲ್ಲಾ ನಿವೃತ್ತರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಸ್ವಾಗತಿಸಿ, ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ಕಳೆದ ಫೆಬ್ರವರಿ 28 ರಂದು ನವದೆಹಲಿಯಲ್ಲಿ ಜರುಗಿದ 237ನೇ ಸಿಬಿಟಿ ಸಭೆಯಲ್ಲಿ ನಿವೃತ್ತರ ಅಧಿಕ ಹಾಗೂ ಕನಿಷ್ಠ ಪಿಂಚಣಿ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲದೆ ಇರುವ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿರುತ್ತಾರೆ.
ನಮ್ಮ ಹೋರಾಟದ ದಿಕ್ಕನ್ನು ಬದಲಿಸಿಕೊಳ್ಳದ ಹೊರತು, ಇಪಿಎಸ್ ನಿವೃತ್ತರು ಜಯ ಸಾಧಿಸಲು ಸಾಧ್ಯವಿಲ್ಲ ಎಂದು, ಅಧ್ಯಕ್ಷರಾದ ನಂಜುಂಡೇಗೌಡ ಸಭೆಯಲ್ಲಿ ಪ್ರಸ್ತಾಪಿಸಿ, ಬಜೆಟ್ ಅಧಿವೇಶನ ಮುಗಿಯಲು ಇನ್ನೊಂದು ತಿಂಗಳು ಬಾಕಿ ಇದ್ದು, ಈ ಅವಧಿಯಲ್ಲಿ ನಮ್ಮ ಬೇಡಿಕೆಗಳು ಕನಿಷ್ಠ ಪಿಂಚಣಿ (₹. 7500/- + ಭತ್ಯೆ, ವೈದ್ಯಕೀಯ ಸೌಲಭ್ಯ) ಹಾಗೂ ಅಧಿಕ ಪಿಂಚಣಿ ಬೇಡಿಕೆಯನ್ನು ಈಡೇರಿಸದೆ ಹೋದಲ್ಲಿ, ನಮ್ಮ ಹೋರಾಟದ ದಿಕ್ಕನ್ನು ಬದಲಿಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಎಲ್ಲಾ ಇಪಿಎಸ್ ನಿವೃತ್ತರು ಸಿದ್ದರಾಗಬೇಕು ಎಂದು ಕರೆ ನೀಡಿದರು. ಮುಂದೆ ಕಾನೂನು ಸಮರ ನಡೆಯಲಿದ್ದು, ಗೆಲುವು ನಿಶ್ಚಿತ ಎಂದಿರುತ್ತಾರೆ.
ಈಗಾಗಲೇ ನಾವು ಸಾಕಷ್ಟು ದಣಿದಿದ್ದೆವೆ, ಇಪಿಎಸ್ ನಿವೃತ್ತರ ತಾಳ್ಮೆ ಪರೀಕ್ಷಿಸಲು ಇದು ಸಕಾಲವಲ್ಲ ಎಂದು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ನ ಅಧ್ಯಕ್ಷರಾದ, ಬ್ರಹ್ಮಚಾರಿಯವರು ಸಭೆಯಲ್ಲಿ ಪ್ರಸ್ತಾಪಿಸಿ, ನಮ್ಮ ಮುಖಂಡರಾದ ಕಮಾಂಡರ್ ಶ್ರೀ ಅಶೋಕ್ ರಾವುತ್ ರವರಿಗೆ, ಕೇಂದ್ರ ಸಚಿವರು ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಿಕೊಡಬೇಕು. ಒಂದು ವೇಳೆ ಕೇಂದ್ರ ಸರ್ಕಾರ ವಿಫಲವಾದಲ್ಲಿ, ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ, ಎಚ್ಚರಿಕೆಯ ಸಂದೇಶ ನೀಡಿದರು. ಇಷ್ಟೊಂದು ಸಂಕಷ್ಟದ ನಡುವೆಯು ಅಧಿಕ ಸಂಖ್ಯೆಯಲ್ಲಿ ನಿವೃತ್ತರು, ಮಾಸಿಕ ಸಭೆಗೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಡೋಲಪ್ಪನವರ ಮುಂದಾನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.
ಇಂದಿನ ಸಭೆಗೆ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಟ್ರಸ್ಟಿನ ಸದಸ್ಯರು, ಎಚ್ಎಎಲ್, ಎಚ್ಎಂಟಿ, ಕಿರ್ಲೋಸ್ಕರ್ ಹಾಗೂ ಎಸ್ಕಾರ್ಟ್ ಕಂಪನಿಯ ನಿವೃತ್ತ ನೌಕರರು ಭಾಗವಹಿಸಿದ್ದರು.
ಸಂಘದ ಪದಾಧಿಕಾರಿಗಳಾದ ನಾಗರಾಜು, ಹಾಗು ಕೃಷ್ಣಮೂರ್ತಿ ಹಾಜರಿದ್ದು, ಸಭೆಯ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಎಲ್ಲಾ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿರುತ್ತಾರೆ