ಸುಮಾರು ಅಂದಾಜಿನ ಪ್ರಕಾರ 14 ಮತ್ತು 15ನೇ ಶತಮಾನದಲ್ಲಿ ಈ ಇತಿಹಾಸ ಕಂಡು ಬರುತ್ತದೆ , ಹಲಗೂರಿನಲ್ಲಿ ಕಮ್ಮಾರರು ಅಂದರೆ ಕಬ್ಬಿಣದ ಕೆಲಸವನ್ನು ಮಾಡುವ ಒಂದು ಗುಂಪನ್ನು ಮೈಸೂರು ಒಡೆಯರ ಪಾಳೆಗಾರರು ಹಿಡಿತದಲ್ಲಿ ಇಟ್ಟುಕೊಂಡಿದ್ದರು ಅವರಿಗೆ, ಬೇಕಾದ ಆಯುಧಗಳನ್ನು ಇಲ್ಲಿ ತಯಾರು ಮಾಡುತ್ತಿದ್ದರು ಎಂದು ಕರೆಯಲಾಗುತ್ತದೆ, ಯುದ್ಧದಲ್ಲಿ ಬೇಕಾಗಿರುವಂತಹ ಖಡ್ಗ ಕುರಣಿ ಕವಚ ವಸ್ತ್ರಗಳನ್ನು ತಯಾರಿಸುತ್ತಿದ್ದರು ಎಂದು ಮಾಹಿತಿ ಕಂಡು ಬರುತ್ತದೆ, ಆದರೆ ಬರೋ ಬರುತ್ತಾ ಈ ಪಾಳಿಗಾರರು ತುಂಬಾ ಶ್ರೀಮಂತ ಬಂದು ಕೃಷಿಗೆ ಬೇಕಾಗಿರುವ ಸಲಕರಣೆಗಳನ್ನು ತಯಾರು ಮಾಡುವುದನ್ನು ಕೈ ಬಿಡುತ್ತಾರೆ, ಇದರಿಂದ ಅಲ್ಲಿ ಕೃಷಿ ಮಾಡುವ ಜನಸಾಮಾನ್ಯರಿಗೆ ಬಹಳ ಕಷ್ಟವಾಗಿ ಮಂಟೇಸ್ವಾಮಿ ಅವರ ಬಳಿ ಹೋಗಿ ದೂರನ್ನು ಸಲ್ಲಿಸುತ್ತಾರೆ, ನಂತರ ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿ ಅವರು ಹಲಗೂರು ಮತ್ತು ಜಿಲ್ಲಾಪುರ ಗ್ರಾಮಗಳಿಗೆ ಹೋಗಿ ಕಬ್ಬಿಣದ ಭಿಕ್ಷೆಯನ್ನು ಕೇಳಲು ಬರುತ್ತಾರೆ, ಆದರ ಸಿದ್ದಪ್ಪಾಜಿ ಅವರಿಗೆ ಈ ಪಾಳೇಗಾರರು ಬಹಳ ಕಷ್ಟವನ್ನು ಕೊಟ್ಟು ಬಹಳಷ್ಟು ಸಾಧ್ಯವಾಗದ ಸವಾಲುಗಳನ್ನು ನೀಡುತ್ತಾರೆ ಆದರೆ ಆ ಸವಾಲುಗಳಿಗೆಲ್ಲ ಜಾಬ್ವನ್ನು ಕೊಟ್ಟು ಕಬ್ಬಿಣದ ಭಿಕ್ಷೆಯನ್ನು ಪಡೆದು ಹೋಗುತ್ತಾರೆ.
https://www.facebook.com/rajkumar.123097?mibextid=ZbWKwL
https://twitter.com/3kalaSanchari?t=XyoRLiUBNFwNBYGlaE3ILA&s=08
Gmail I D :- [email protected]