ಕಳೆದ 15 ವರ್ಷಗಳಿಂದ ಶಿವಯೋಗ ಸಾಧನೆಯಲ್ಲಿ ನಿರತರಾಗಿ ಅಪಾರವಾದ ಶಿವಾನುಭಾವವನ್ನು ಹೊಂದಿರುವ ಶಿವಶರಣ ಸುನಿಲ್ ದನಿಗೊಂಡ ಹಾಗೂ ಇವರ ಯುವ ಮಿತ್ರ ಶರಣರು ಆಗಮಿಸಿ ಶಿವಯೋಗ ಸಾಧನೆಗಾಗಿ ವೈಜ್ಞಾನಿಕ ಇಷ್ಟಲಿಂಗಗಳನ್ನು ಪಡೆದುಕೊಂಡು ಕೆಲ ನಿಮಿಷಗಳ ಕಾಲ ಪ್ರಾತ್ಯಕ್ಷಿಕೆ ನಡೆಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಮೂಲತಃ ಧಾರವಾಡ ಜಿಲ್ಲೆಯ ಹಿರೇ ಹೊನ್ನಳ್ಳಿಯ ಈ ಶರಣ ಬಳಗ ಬಸವ ತತ್ವ ಅನುಸರಣೆ ಹಾಗೂ ಶಿವಯೋಗ ಸಾಧನೆಗೆ ಹೆಸರುವಾಸಿಯಾಗಿದೆ. ಅನುಭಾವಿ ಶರಣ ಸುನಿಲ್ ದನಿಗೊಂಡ ಇವರು ಅನೇಕ ಯುವಕರಿಗೆ ಶಿವಯೋಗದ ಮಹತ್ವವನ್ನು ತಿಳಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರ ಸತ್ಸಂಗ ಹಾಗೂ ಮಾರ್ಗದರ್ಶನದಲ್ಲಿ ಪಳಗಿದ ಯುವ ಶರಣರಾದ ಅಶೋಕ ಅಂಗಡಿ, ಹನುಮಂತ ಹೊಂಗಲ, ಶ್ರೀಧರ್ ಪವಾರ ಮತ್ತು ಸಹದೇವ ಉಳ್ಳಾಗಡ್ಡಿ ಇವರ ಉತ್ಸಾಹ ಕಂಡು ಅತ್ಯಂತ ಸಂತೋಷವಾಯಿತು.
ಆಧುನಿಕತೆ, ಮೊಬೈಲ್ ಗೀಳು ಹಾಗೂ ವಿದೇಶಿ ಸಂಸ್ಕೃತಿಗಳ ಹಾವಳಿಯಲ್ಲಿಯೂ ಸಮಯವನ್ನು ವ್ಯರ್ಥ ಮಾಡದೆ ಮಣ್ಣಿನ ಸಂಸ್ಕೃತಿ ಹಾಗೂ ಶರಣ ಪರಂಪರೆಯನ್ನು ಅಳವಡಿಸಿಕೊಂಡು ಇಷ್ಟಲಿಂಗ ಶಿವ ಯೋಗ, ದೃಷ್ಟಿಯೋಗ, ಲಿಂಗಾಂಗ ಸಾಮರಸ್ಯ ಸಾಧನೆಯಲ್ಲಿ ತೊಡಗಿಸಿಕೊಂಡಿರುವುದು ಅತ್ಯಂತ ಆನಂದ ಹಾಗೂ ಹೆಮ್ಮೆಯ ಸಂಗತಿಯಾಗಿದ್ದು ಇತರರಿಗೂ ಆದರ್ಶಮಯವಾಗಿದೆ.
ಹೀಗೆ ಶಿವ ಮೆಚ್ಚುವಂತ ಸಾತ್ವಿಕ ಹಾದಿಯಲ್ಲಿರುವ ಈ ಶರಣ ಬಳಗದವರಿಗೆ ಸದಾ ಕಾಲ ಶಿವಾನುಗ್ರಹವಿರಲಿ ಅಪಾರವಾದ ಶಿವಾನುಭವ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇವೆ.
#BenalmathKantiworks #IshtalingaManufacturer #IshtalingaShivayoga #Ishtalinga #ಇಷ್ಟಲಿಂಗ #ಶಿವಯೋಗ #karnataka #motivation #basavanna #vachana
To know more about the Ishtalinga 👇
https://tuppadakantilinga.com/product-category/scientific-ishtalinga/