MENU

Fun & Interesting

KANNADA LENTEN SONGS I ಕನ್ನಡ ತಪಸ್ಸು ಕಾಲದ ಗೀತೆಗಳು I JUKE BOX

S.KIRAN KUMAR 5,185 1 day ago
Video Not Working? Fix It Now

KANNADA LENTEN SONGS I ಕನ್ನಡ ತಪಸ್ಸು ಕಾಲದ ಗೀತೆಗಳು I JUKE BOX SINGER : FR VIJAYRAJ JANET MUSIC : KIRAN KUMAR ಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ್ವೆ ಮಣ್ಣಿಗೆ 1.ಪಾಪದೋಷ ಹೃದಯದಿಂದ ಮರುಗುವಾ ಬೇಗ ನಮ್ಮ ದೇವರೆಡೆಗೆ ಸಾಗುವಾ ದಯಾವಂತ ಕರುಣಶೀಲ ದೇವರು ಪಾಪ ದೋಷ ನಮಗೆ ಕ್ಷಮಿಸಿ ಬಿಡುವರು 2.ಸುಳ್ಳು ಬೇಡ ಸತ್ಯ ಹಾದಿ ಹುಡುಕುವಾ ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವಾ ಕರ್ತ ದೇವ ನಮ್ಮ ಕೂಡ ಇರುವರು ದಿವ್ಯ ಕೃಪೆಯ ನಮ್ಮ ಮೇಲೆ ಸುರಿವರು 3.ಬನ್ನಿ ಜನರೇ ಕರ್ತರನ್ನು ತಿಳಿಯುವಾ ದೇವರನ್ನು ಹುಡುಕಿ ಹುಡುಕಿ ಅರಿಯುವಾ ಕೋಪ ತ್ಯಜಿಸಿ ದಂಡ ಶಿಕ್ಷೆ ತೊರೆವರು ಹಸ್ತ ನೀಡಿ ಕೇಡಿನಿಂದ ಪೊರೆವರ 4.ಮೊರೆಯ ಕೇಳಿ ಸತ್ಯವಂದ ದೇವರೇ ನೆರವ ನೀಡಿ ಮಕ್ಕಳನ್ನು ಪೊರೆಯಿರಿ ನಿಮ್ಮ ನಾಮ ಮಹಿಮೆಗಾಗಿ ಕರ್ತರೇ ನಮ್ಮ ಬಾಳ ರಕ್ಷೆಯನ್ನು ಗೈಯಿರಿ ಓ ಮಾನವ ನೀ ಧ್ಯಾನಿಸು ಕ್ರಿಸ್ತ ಮರಣವ 1.ಮನುಜ ಗೈದ ಪಾಪಕ್ಕೆ ಯೇಸುಸ್ವಾಮಿಯು ಪ್ರಾಯಶ್ಚಿತ್ತ ಗೈದರು ಯೇಸುಸ್ವಾಮಿಯು ಓ ಯೇಸುವೇ ನಿನ್ನ ಮರಣಕ್ಕೆ ನಾನೇ ಕಾರಣ ಕ್ಷಮಿಸು ಎನ್ನನು 2.ಶಿಲುಬೆ ಮೇಲೆ ಮಡಿದರು ಯೇಸುಸ್ವಾಮಿಯು ಪಾಪಕ್ಷಮೆಯನ್ನಿತ್ತರು ಯೇಸುಸ್ವಾಮಿಯು ಓ ಯೇಸುವೇ ನಿನ್ನ ಮರಣಕ್ಕೆ ನಾನೇ ಕಾರಣ ಕ್ಷಮಿಸು ಎನ್ನನು ಪಾಪಿ ಎನ್ನ ರಕ್ಷಣೆಗಾಗಿ ಪ್ರಾಣ ನೀಗಿದ ಓ ಯೇಸು ಸ್ವಾಮಿ ನಿಮಗೆ ವಂದನೆ ಸದಾ 1. ಶಿಲುಬೆ ಮರದ ಮೇಲೆ ತೂಗಿ ಮೃತ್ಯುವಪ್ಪಿದ ಪರಮ ತ್ಯಾಗಿ ಯೇಸು ನಿಮಗೆ ಮಣಿವೆ ನಾ ಸದಾ 2. ಮೂರು ತಾಸು ಶಿಲುಬೆ ಮೇಲೆ ತೂಗಿ ನಿಂತಿರಿ ಮರಣ ಶಯ್ಯೆಯೊಳ್ ನೀವು ವಿಪುಲ ಪಾಡು ಪಟ್ಟಿರಿ 3. ರಕ್ತ ಸುರಿಸಿ ನೀರು ಹರಿಸಿ ಪಾಪ ತೊಳೆದಿರಿ ಶತ್ರು ಪಾಶದಿಂದ ಬಿಡಿಸಿ ಮುಕ್ತಿ ಗೈದಿರಿ 4. ನಿರುತ ನಿಮ್ಮ ಪಾಡು ಮರಣ ಸ್ಮರಿಸಿ ಬಾಳಲು ನೀಡಿ ಎಮಗೆ ಕೃಪೆಯ ದಾನ ನಿಮ್ಮ ಸೇರಲು ರಕ್ಷಕರ ಬಾಧೆಯನ್ನು ಓ ಕ್ರೈಸ್ತರೇ ಕೇಳಿರಿ ಸುರಿಯುವ ರಕ್ತವನ್ನು ನೋಡಿ ಪ್ರಲಾಪಿಸಿರಿ ನಿಮ್ಮ ಸರ್ವ ಪಾಪಕ್ಕಾಗಿ ಬಾಧಿಸಲ್ಪಡುತ್ತಾರೆ ನಿಮ್ಮ ಪ್ರಾಯಶ್ಚಿತ್ತಕ್ಕಾಗಿ ಕಾದು ನಿಂತಿರುತ್ತಾರೆ 1. ಯೇಸುಕ್ರಿಸ್ತ ವನದೊಳು ಪಾಡು ಪೀಡೆ ಸೈರಿಸಿ ಕಲನ ಸಂಕಟಗಳು ಕ್ಲೇಶವನ್ನು ಸಹಿಸಿ ಪಿತನನ್ನು ಬೇಡಿಕೊಂಡು ಅಂಜಿಕೆ ಪಡುತ್ತಾರೆ ಮತ್ತು ದೃಢವಾಗಿ ಎದ್ದು ಮರಣಕ್ಕೊಪ್ಪುತ್ತಾರೆ 2. ದ್ರೋಹಿಯಾದ ಜೂದಾಸನು ಮುದ್ದಿಕ್ಕ ಬರುತ್ತಾನೆ ತನ್ನ ದಿವ್ಯ ಗುರುವನ್ನು ತೋರಿಸಿಕೊಡುತ್ತಾನೆ ಅವನಂತೆ ಪಾಪಿಷ್ಟನು ದ್ರೋಹವ ಮಾಡುತ್ತಾನೆ ಭಂಗವಾಗಿ ಯೇಸುವನ್ನು ಪರಿತ್ಯಜಿಸುತ್ತಾನೆ 3. ಕ್ರೂರವಾದ ವೈರಿಗಳು ಛಲ ತೀರಿಸುತ್ತಾರೆ ಅವರ ಮೇಲೆ ಕೈಗಳ ಅಂಜದೆ ಹಾಕುತ್ತಾರೆ ದೇವದೂತರೇ ಅದನ್ನು ನೋಡಿ ದುಃಖಿಸುತ್ತೀರಿ ಯಾಕೆ ನಿಮ್ಮ ದೇವರನ್ನು ಕಾಪಾಡದಿರುತ್ತೀರಿ 4. ದುಷ್ಟರು ರಕ್ಷಕರನ್ನು ಕಟ್ಟಿ ಎಳೆಯುತ್ತಾರೆ ಅರ್ಚಕರು ಯೇಸುವನ್ನು ಬೈದು ದೂಷಿಸುತ್ತಾರೆ ಪಾಪಿಗಳೇ ಕಡೇ ತೀರ್ಪು ಜ್ಞಪ್ತಿ ಮಾಡಿಕೊಳ್ಳಿರಿ ಆಗ ದೇವ ಕೋಪವನ್ನು ತಪ್ಪಿಸಿಕೊಳ್ಳುವಿರಿ 5. ಯೇಸುವಿನ ಪ್ರೇಷಿತರು ತೊಲಗಿ ಓಡುತ್ತಾರೆ ಅವರ ನಾಯಕರಂತೂ ಯೇಸುವ ಬೊಂಕುತ್ತಾರೆ ದಯಾಮಯ ರಕ್ಷಕರು ದೃಷ್ಟಿಯನ್ನು ಬೀರಲು ಕ್ಷಣದಲ್ಲೇ ರಾಯಪ್ಪರು ಮನ ತಿರುಗುತ್ತಾರೆ 6. ಅಗೋ ಹೆರೊದೆಸ್ ರಾಯನು ಯೇಸುವನ್ನು ನಿಂದಿಸಿ ಬಿಳುಪಾದ ಬಟ್ಟೆಯನ್ನು ಅವರಿಗೆ ಹೊದಿಸಿ ಮದದಿಂದ ಅಂಧನಾಗಿ ಹುಚ್ಚೆಂದು ಸಾರುತ್ತಾನೆ ಭಂಗವಾದ ಮಾನ ಕಂಡು ಯಾರು ಗರ್ವಿಸುತ್ತಾರೆ 7. ಪಿಲಾತ ಪಾತಕಿಯನ್ನು ಮನ್ನಿಸಿ ಬಿಡುತ್ತಾನೆ ಯೇಸುವನ್ನು ಮರಣಕ್ಕೆ ಅಯ್ಯೋ ನೇಮಿಸುತ್ತಾನೆ ಆಜ್ಞೆಯಲ್ಲಿ ಏನನ್ಯಾಯ ನೀತಿಯಲ್ಲಿ ಲೋಪವು ಸತ್ಯ ನಿರಪರಾಧವು ಶಿಕ್ಷೆಗೊಳಗಾಯಿತು 8. ಕಂಬಕ್ಕೆ ಬಂಧಿಸಲ್ಪಟ್ಟ ಶುದ್ಧ ಕೆಂಗುರಿ ಮರಿ ಕ್ರೂರ ಚಿಪ್ರಾಣಿಯ ಏಟು ತಿನ್ನುವುದ ನೋಡಿರಿ ನಾವೇ ಅಪರಾಧಿಗಳು ಸೇವಕರೇ ತಾಳಿರಿ ನಾವೇ ಶಿಕ್ಷೆಗೆ ಪಾತ್ರರು ಆಲೋಚಿಸಿಕೊಳ್ಳಿರಿ 9. ಮುಳ್ಳಿನ ಕಿರೀಟವು ಶಿರಸ್ಸ ಚುಚ್ಚುತ್ತದೆ ಆತನ ತಿರು ರಕ್ತವು ಮುಖವ ಮುಚ್ಚುತ್ತದೆ ಹೂವಿನ ಕಿರೀಟವನ್ನು ಧರಿಸುವ ಜನರೇ ನಿಮ್ಮ ಮೃದು ಗುಣವನ್ನು ನೋಡಿ ನಾಚಲಾರಿರೇ 10. ಭಾರವುಳ್ಳ ಮರವನ್ನು ಕಷ್ಟದಿಂದ ಸಹಿಸಿ ಪರ್ವತ ಏರುವುದನ್ನು ಬುದ್ಧಿಯಲ್ಲಿ ಯೋಚಿಸಿ ಶಿಲುಬೆಗೆ ಕಟ್ಟಲ್ಪಟ್ಟು ಪಿತನ ನೋಡುತ್ತಾರೆ ಕೊಲೆಗಾರರಂ ಕುರಿತು ಕ್ಷಮೆಯ ಬೇಡುತ್ತಾರೆ 11. ಮೂರು ತಾಸು ಶ್ರಮ ಪಟ್ಟು ಪ್ರಾಣವ ಬಿಡುತ್ತಾರೆ ಸ್ತ್ರೀಯರು ಸಮೀಪ ನಿಂತು ಕಣ್ಣೀರು ಚೆಲ್ಲುತ್ತಾರೆ ಬುದ್ಧಿಹೀನ ವಸ್ತುಗಳು ಕಸ್ತಿ ತೋರಿಸುತ್ತವೆ ಆದರೆ ಪಾಪಾತ್ಮಗಳು ಮರುಗದಿರುತ್ತವೆ 12. ಶಿಲುಬೆಯ ಬಲಿಯನ್ನು ನಿಧಾನಿಸಿ ನೋಡಿರಿ ಹೊಂದಿದ ವೇದನೆಯನ್ನು ತಿಳಿದುಕೊಳ್ಳಲಾರಿರಿ ರಕ್ಷಕರ ಬಾಧೆಯನ್ನು ಕಂಡ ಸರ್ವ ಜನವೇ ಯಾವಾಗಲೂ ಯೇಸುವನ್ನು ಸ್ನೇಹಿಸಬೇಕಲ್ಲವೇ

Comment