MENU

Fun & Interesting

ಕೊರಗ ಭಾಷೆ | KORAGA | LANGUAGE | KANNADA | KARNATAKA | ಬಹು ಕರ್ನಾಟಕ | BAHU Karnataka

eedina 19,473 4 months ago
Video Not Working? Fix It Now

#bahukarnataka #eedinabahukarnataka #koragalanguage ಕರ್ನಾಟಕದಲ್ಲಿ ಅಳಿವಿನಂಚಿನಲ್ಲಿರುವ, ಕನ್ನಡ ಲಿಪಿಯನ್ನೇ ನೆಚ್ಚಿಕೊಂಡ ಭಾಷೆಗಳಲ್ಲಿ ಕೊರಗ ಸಮುದಾಯದ ಭಾಷೆಯೂ ಒಂದು. ರಾಜ್ಯಾದ್ಯಂತ ಸರಿಸುಮಾರು 12,000 ಮಂದಿ ಕೊರಗರು ಇದ್ದರೂ, ಕೊರಗ ಭಾಷೆಯನ್ನು ಮಾತನಾಡುವವರ ಸಂಖ್ಯೆ ಅಂದಾಜು ಮೂರು ಸಾವಿರ ಮಂದಿ. ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಈ ಸಮುದಾಯದ ಮೂಲ ಕಸುಬು ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟ. ಆದರೆ, ಈಗ ಉಳಿದುಕೊಂಡಿರುವುದು ಬುಟ್ಟಿ ಹೆಣಿಗೆ ಮಾತ್ರ. ಹೆಚ್ಚಿನ ಮಂದಿ ನಗರಗಳ-ಪಟ್ಟಣಗಳ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. * * * * * ಅಳಿವಿನಂಚಿನಲ್ಲಿರುವ ಕನ್ನಡೇತರ ಭಾಷೆಗಳನ್ನು ನಮ್ಮದೇ ಮಿತಿಯಲ್ಲಿ ಪರಿಚಯಿಸುವುದು ಈ ‘ಬಹು ಕರ್ನಾಟಕ’ ಸರಣಿಯ ಉದ್ದೇಶ. ಈ ವಿಡಿಯೋಗಳಲ್ಲಿ, ಆಯಾ ಭಾಷೆಯ ಇಬ್ಬರು ಕುಂತು, ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಾರೆ. ಇವುಗಳಲ್ಲಿ ಬಹುತೇಕ ಭಾಷೆಗಳು ನಮಗೆ ಅರ್ಥವಾಗದೆ ಹೋಗಬಹುದು. ಆದರೆ, ಕನ್ನಡ ನಾಡಿನಲ್ಲೇ ಬದುಕುತ್ತಿರುವ ಈ ಜನರ ಭಾಷೆಗಳು ಹೇಗಿರಬಹುದು ಮತ್ತು ಕನ್ನಡದ ಯಾವೆಲ್ಲ ಪದಗಳು ಈ ಭಾಷೆಗಳಲ್ಲಿ ಬಳಕೆಯಲ್ಲಿರಬಹುದು ಅಂತ ತಿಳಿದುಕೊಳ್ಳೋ ಕುತೂಹಲಕ್ಕಾದರೂ ನೀವು ಈ ವಿಡಿಯೊಗಳನ್ನು ನೋಡಿದರೆ ನಮಗೆ ರಾಶಿ ಖುಷಿ. ಕನ್ನಡದೊಟ್ಟಿಗೆ ಸಾವಿರಕ್ಕೂ ಹೆಚ್ಚು ಪುಟ್ಟ-ಪುಟ್ಟ ಭಾಷೆಗಳು ಲಿಪಿಯ ನಂಟು ಹೊಂದಿವೆ ಅನ್ನೋದೇ ಆಶ್ಚರ್ಯದ ಮತ್ತು ಸಡಗರದ ವಿಷಯ. ಆದರೆ, ನಾವೆಲ್ಲರೂ, ಕನ್ನಡ ಭಾಷೆಗಿರುವ ಆತಂಕಗಳ ಬಗ್ಗೆ ಮಾತನಾಡ್ತಿದ್ದೇವೆಯೇ ವಿನಾ ಕನ್ನಡ ಲಿಪಿಯನ್ನೇ ನೆಚ್ಚಿಕೊಂಡಿರುವ ಈ ಭಾಷೆಗಳಿಗಿರುವ ಆತಂಕಗಳ ಬಗ್ಗೆ ಗಮನ ಕೊಟ್ಟೇ ಇಲ್ಲ. ಈ ಭಾಷೆಗಳ ಕುರಿತು ಅಲ್ಲಲ್ಲಿ-ಆಗಾಗ ಅಧ್ಯಯನಗಳು ನಡೆದಿವೆ ನಿಜ; ಆದ್ರೆ, ಬರೀ ಅಧ್ಯಯನಗಳನ್ನು ತಗೊಂಡು ಎಂತ ಮಾಡೋದು? ಹಾಗಾಗಿ, 2024ರ ನವೆಂಬರ್ ನೆಪದಲ್ಲಾದ್ರೂ ಇತ್ತ ಗಮನ ಹರಿಸೋಣ ಅನ್ನೋದು ಈದಿನ.ಕಾಮ್ ಆಶಯ. ವಿಡಿಯೊಗಳನ್ನು ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಹಾಗೆಯೇ, ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದ್ರೆ ದಯವಿಟ್ಟು ವಿಡಿಯೊಗಳನ್ನು ಶೇರ್ ಮಾಡಿ. * * * * * ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media) https://pages.razorpay.com/pl_OoJj7ZDX2kI21P/view Join this channel to get access to perks: https://www.youtube.com/channel/UCS2HcegCDGutUT9M6JPju_Q/join Like Share Subscribe eedina/YouTube ಸತ್ಯ | ನ್ಯಾಯ | ಪ್ರೀತಿ ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ. ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ. Click👇 YouTube https://bit.ly/3B8dxxM Website https://bit.ly/3EWnakh Facebook https://bit.ly/3gUt65o Twitter https://bit.ly/3FpczQz Instagram https://bit.ly/3uqN1Mg #ಕೊರಗ #ಜನಸಾಮಾನ್ಯರು #ಬದುಕು #ಜನಜೀವನ #ಭಾಷೆ #ಕನ್ನಡ #ಲಿಪಿ #ಸಮುದಾಯ #ಬುಡಕಟ್ಟು #ದಕ್ಷಿಣಕನ್ನಡ #ಉಡುಪಿ #ಹಾಸನ #ಚಿಕ್ಕಮಗಳೂರು #ಉತ್ತರಕನ್ನಡ #ಕರ್ನಾಟಕ #ಕಾಸರಗೋಡು #ಕೇರಳ #ದಕ್ಷಿಣಭಾರತ #Koraga #People #Tribe #Life #Lifestyle #Langugae #Community #Indigenous #DakshinaKannada #Udupi #Hassan #UttaraKannada #Chikkamagaluru #Karnataka #Kasaragod #Kerala #SouthIndia #eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಈದಿನಸುದ್ದಿವಿಶ್ಲೇಷಣೆ

Comment