ಮಲೆನಾಡಿನ ಬಳೆ ಕೋಲಾಟ | Malnadu Kolata | Malenadu Video | Kannada News
#malnadukolata #malenaduvideo #kannadanews
ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ನಡೆದ ಬೆಳ್ಳಿ ಬಳೆ ಕೋಲಾಟ. ಇಡೀ ರಾತ್ರಿ ಹಾಡುತ್ತಾ, ಕುಣಿಯುವ ಮಲೆನಾಡಿನ ಈ ಕೋಲಾಟ ನೋಡಲು ಜನರ ದಂಡೇ ನೆರೆದಿರುತ್ತದೆ.
ಪ್ರತಿ ವರ್ಷ ಕಾರ್ತಿಕ ದೀಪೋತ್ಸವದಂದು ಬೆಳ್ಳಿ ಬಳೆ ಕೋಲಾಟವನ್ನು ಆಯೋಜಿಸಲಾಗುತ್ತದೆ. ಈ ಕೋಲಾರದಲ್ಲಿ ಭಾಗವಹಿಸಿ ಗೆದ್ದ ತಂಡಕ್ಕೆ ಬೆಳ್ಳಿ ಬಳೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
2024ರ ಈ ವರ್ಷ ಅಂಬಾರಗೋಡ್ಳು ಹಾಗೂ ಬೇಸೂರು ತಂಡ ಭಾಗವಹಿಸಿದ್ದವು. ತೀರ್ಪುಗಾರರಾಗಿ ನಿಡುಗೋಡು ಬಸವರಾಜ ಗೌಡ, ರೂಪ ರಮೇಶ್, ಕಸ್ತೂರಿ ಭಾಗವಹಿಸಿದ್ದರು.
ಇಡೀ ರಾತ್ರಿ ಅದ್ಭುತ ಕೋಲಾಟ ಪ್ರದರ್ಶನ ನೀಡಿದಂತ ಅಂಬಾರಗೋಡ್ಳು ತಂಡ ಪ್ರಥಮ ಸ್ಥಾನಗಳಿಸಿತು. ದ್ವಿತೀಯ ಸ್ಥಾನವನ್ನು ಬೇಸೂರು ತಂಡ ಪಡೆಯಿತು.
ವರದಿ: ವಸಂತ ಬಿ ಈಶ್ವರಗೆರೆ