ಸದಾ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವ ರಾಮೇಶ್ ಅರವಿಂದ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಯಾಗಿದ್ದು ಅವರ ಮೋಟಿವೇಷನಲ್ ಸ್ಪೀಚ್‌ಯಿಂದ. ಸಿನಿಮಾ ನಟನಾಗಿ, ನಿರ್ದೇಶಕನಾಗಿ, ನಿರೂಪಕನಾಗಿ, ಮೋಟಿವೇಷನಲ್ ಸ್ಪೀಕರ್ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ರಮೇಶ್ ಅರವಿಂದ್ ಅವರಿಗೆ ಎಲ್ಲ ಜೆನರೇಷನ್ ನಲ್ಲಿಯೂ ಅಭಿಮಾನಿಗಳಿದ್ದಾರೆ. ವಿವಿಧ ಬಗೆಯ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದು ಕನ್ನಡದ ಚಿತ್ರರಂಗದಲ್ಲಿ ಎವರ್ಗ್ರೀನ್ ಹೀರೋ ಆಗಿ ರಮೇಶ್ ಅರವಿಂದ್ ಅವರು ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಕೂಡ ಅವರಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ತಮ್ಮ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ‘ಪ್ರೀತಿಯಿಂದ ರಮೇಶ್.. ಯಶಸ್ಸಿನ ಸರಳ ಸೂತ್ರಗಳು’ ಪುಸ್ತಕ ಎಲ್ಲಿರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
#ramesharavind #motivation
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka