ಎಲ್ಲ ವೇದಾಂತ ಪ್ರಿಯರಿಗೆ ನಮಸ್ಕಾರಗಳು. ತಾ. 05-12-2024 ಗುರುವಾರದಂದು , ಮಹಾಮಹೋಪಾಧ್ಯಾಯ ಡಾ.ಕೆ.ಜಿ. ಸುಬ್ರಾಯ ಶರ್ಮಾರವರು ಪ್ರಾರಂಭಿಸಿರುವ " ಸುಗಮಾ" ಎಂಬ ವೇದಾಂತ ಗ್ರಂಥದಲ್ಲಿ "ಅಧ್ಯಾಸಭಾಷ್ಯ" ಕುರಿತು ಕನ್ನಡದಲ್ಲಿ ಪ್ರವಚನ. ಇಂದು 22-02-2025 ರ ಪ್ರವಚನ ಭಾಗ - ಪ್ರಥಮಃ ಖಂಡಃ - ADHYASABHAASHYA .- 035 ಭಗವತ್ಪಾದ ಶಂಕರರು ತಮ್ಮ ಬ್ರಹ್ಮಸೂತ್ರ ಭಾಷ್ಯಕ್ಕೆ ಪೀಠಿಕೆಯಾಗಿ ಬರೆದಿರುವ ಅಧ್ಯಾಸಭಾಷ್ಯವು ಅದ್ವೈತ ವೇದಾಂತದರ್ಶನವನ್ನು ಅನುಭವದಲ್ಲಿ ತಿಳಿಯಲು ಬಹಳ ಮುಖ್ಯವಾಗಿದೆ. ಪ್ರಾತಃಸ್ಮರಣೀಯರೂ, ಆದರ್ಶ ಯತಿವರೇಣ್ಯರೂ, ಬ್ರಹ್ಮನಿಷ್ಠರೂ ಆದ ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸಂಸ್ಥಾಪಕರಾದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು ಸುಮಾರು 250 ಕ್ಕೂ ಹೆಚ್ಚು ಉದ್ಗ್ರಂಥಗಳನ್ನು ಕನ್ನಡ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಅಧ್ಯಾಸ ಭಾಷ್ಯ ವಿವರಿಸಲು " ಸುಗಮಾ" ಎಂಬ ಶ್ರೇಷ್ಠ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಪೂಜ್ಯ ಸ್ವಾಮಿಗಳ ಬಳಿ ೧೬ ವರ್ಷಗಳಕಾಲ ಅವಿರತವಾಗಿ ಅಂತೇವಾಸಿಯಾದ ಸಂಚಾರೀ ವೇದಾಂತ ವಿಶ್ವಕೋಶರಾದ ಮಹಾಮಹೋಪಾಧ್ಯಾಯ ಡಾ. ಕೆ.ಜಿ.ಸುಬ್ರಾಯಶರ್ಮರು ಕನ್ನಡದಲ್ಲಿ ಉಪನ್ಯಾಸವನ್ನು ಎಲ್ಲ ಜಿಜ್ಞಾಸು ಮುಮುಕ್ಷು ಜನಗಳಿಗಾಗಿ ಉಚಿತವಾಗಿ ಅಚ್ಚ ಕನ್ನಡದಲ್ಲಿ ನಿತ್ಯ ಆನ್ ಲೈನ್ ನಲ್ಲಿ ಪ್ರವಚನ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಪ್ರಾರಂಭದ ದಿವಸ ಶ್ರೀಶರ್ಮರಿಂದಲೂ, ಜೊತೆಗೆ ನೆರದಿದ್ದ ಎಲ್ಲ ವೇದಾಂತಾಸಕ್ತರಿಂದಲೂ ಶ್ರೀ ಶಂಕರರ ಪೂಜೆಮಾಡಿ, ಮಾಡಿಸಿ ಅಧ್ಯಾಸಭಾಷ್ಯ ಪಾಠ ಶುರು ಮಾಡಿರುವುದು ಒಂದು ಆದರ್ಶವೇ ಸರಿ. ಶ್ರೀ ಶರ್ಮರು ಅವ್ಯಾಜ ಕರುಣಾ ಮೂರ್ತಿಗಳಾಗಿ, ಆದರ್ಶ ಗೃಹಸ್ಥರಾಗಿ, ಶ್ರೋತ್ರಿಯ ಬ್ರಹ್ಮನಿಷ್ಠರಾಗಿ ಕೇಳುಗರಿಂದ ಕೇವಲ ಕಿವಿಯನ್ನು ಮಾತ್ರ ಅಪೇಕ್ಷಿಸುತ್ತಾ ಹೇಗಾದರೂ ಎಲ್ಲ ಮಾನವರೂ ಜಾತಿ, ವರ್ಣ ಆಶ್ರಮಗಳ ಭೇದವಿಲ್ಲದೆ ಉಪದೇಶಿಸಿ ಮಾನವ ಜನ್ಮದ ಸಾರ್ಥಕ್ಯತೆಯನ್ನು ತೋರಿಸುತ್ತಿರುವ ಸದ್ಗುರುಗಳು. ವಿಶೇಷವೆಂದರೆ ಭಗವತ್ಪಾದ ಶಂಕರರು ತಮ್ಮ ಅಧ್ಯಾಸ ಭಾಷ್ಯದಲ್ಲಿ ಒಂದೂ ಶ್ರುತಿವಾಕ್ಯಗಳನ್ನು ಸೂಚಿಸದೆ ಸ್ವತಂತ್ರವಾಗಿ ಕಾವ್ಯಮಯವಾಗಿ ಎಲ್ಲ ಸಾಮಾನ್ಯ ಜನಗಳಿಗೂ ಅನ್ವಯಿಸುವಂತೆ , ಎಲ್ಲರ ನಿತ್ಯ ಅನುಭವದಲ್ಲಿರುವಂತೆ ವಿವರಿಸಿದ್ದಾರೆ. Recorded, edited, produced and published by Chitradurga Sanjeeva Murthy - [email protected]. All rights reserved. ಶುಭಮಸ್ತು. ಸರ್ವೇಜನಾಃ ಸುಖಿನಶ್ಚ ನೀರೋಗಿನಶ್ಚ ಭವನ್ತು