MENU

Fun & Interesting

The Serene Path

The Serene Path

Inner Radiance
ಅಧ್ಯಾತ್ಮ – "ಅಧಿ+ಆತ್ಮ" ಅಂದರೆ ನಮ್ಮತ್ತ ನೋಡುವುದು. ಅರ್ಥಾತ್ ನಮ್ಮತ್ತ ನಾವೇ ನೋಡುವುದರಲ್ಲಿ ಆತ್ಮಪರೀಕ್ಷಣೆ ಬರುತ್ತದೆ. ಆತ್ಮಪರೀಕ್ಷಣೆಯಿಂದಾಗಿ ನಮ್ಮ ಜೀವನದ ಆಳದಲ್ಲಿ ಹುದುಗಿರುವ ಜೀವನದ ಅರ್ಥವೇನು ? ಎಂಬುದರ ವಿಚಾರ ಆರಂಭವಾಗುತ್ತದೆ ಮತ್ತು ಆ ಮೇಲೆ ‘ಪೂರ್ಣತ್ವದ ಒಂದು ಭರವಸೆ ಮೂಡುತ್ತದೆ.
ಇಂದಿನ ಸಂಘರ್ಷಮಯ ಜೀವನದಲ್ಲಿ ಮನಃಶಾಂತಿಯನ್ನು ಪಡೆಯುವುದು ಅತ್ಯಂತ ಆವಶ್ಯಕವಾಗಿದೆ. ಅತ್ಯಂತ ಒತ್ತಡಮಯ ಮತ್ತು ಅಸುರಕ್ಷಿತ ದೈನಂದಿನ ಜೀವನ ಇವೆಲ್ಲವುಗಳಿಂದ ಜೀವ ಬೇಡವೆನಿಸುತ್ತದೆ. ಮನಸ್ಸಿನಲ್ಲಿ ಬರುವ ಚಿಂತೆ, ದುಃಖ, ಯಾವುದಾದರೊಂದು ಆಪತ್ತಿನ ನಂತರ ಮನಸ್ಸಿನ ಮೇಲಾಗುವ ಆಘಾತ ಇವೆಲ್ಲವನ್ನೂ ಯಶಸ್ವಿಯಾಗಿ ಎದುರಿಸುವಾಗ ಇತರ ಅನೇಕ ವಿಷಯಗಳ ಹಾಗೆ ಆಧ್ಯಾತ್ಮಿಕ ದೃಷ್ಟಿಕೋನಗಳಿಂದ ತುಂಬಾ ಲಾಭವಾಗುತ್ತದೆ.
ಸಂಕಟಗಳು ಬಂದಾಗ ಪರಿಸ್ಥಿತಿಯನ್ನು ದೂಷಿಸುತ್ತಾ ಕುಳಿತರೆ, ಮನಸ್ಸಿಗೆ ನಿರಾಶೆ ಬರುತ್ತದೆ; ಆದರೆ ‘ದೇವರಿಗೆ ಈ ಪ್ರಸಂಗದಿಂದ ನನಗೆ ಏನೋ ಕಲಿಸಲಿಕ್ಕಿದೆ ಅಥವಾ ‘ದೇವರು ಏನೆಲ್ಲ ಮಾಡುತ್ತಾನೆಯೋ, ಅದೆಲ್ಲವೂ ನನ್ನ ಒಳಿತಿಗಾಗಿಯೇ ಇದೆ, ಎನ್ನುವ ವ್ಯಕ್ತಿಗೆ ತಕ್ಷಣ ನಿರಾಶೆ ಬರುವುದಿಲ್ಲ.

ಅಧ್ಯಾತ್ಮದ ಬಗ್ಗೆ ಒಲವು ಹೆಚ್ಚಿಸಿ ಮಾನಸಿಕ ನೆಮ್ಮದಿ ನೀಡುವುದೇ ನಮ್ಮ ಈ ಚಾನೆಲ್ ನ ಉದ್ದೇಶ.

ನಿಮಗೆ ಇಷ್ಟವಾದಲ್ಲಿ ದಯವಿಟ್ಟು "SUBSCRIBE" ಮಾಡಿ ಹಾಗೂ ನಿಮ್ಮವರಿಗೆ "SHARE" ಮಾಡಿ .

"ಶ್ರೀ ಕೃಷ್ಣಾರ್ಪಣ ಮಸ್ತು"