ನಿಮ್ಮಲ್ಲೊಬ್ಬ❤️ ಬಂದ್ರಾ...? ಬನ್ನಿ 😄 Neet ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan)ಅಂತ. ಈ ಯೂಟ್ಯೂಬ್ ಚಾನೆಲ್ ಹೆಸರು ಬಂದು "ನ್ಯೂಜ್ ಅಲರ್ಟ್"(Newz Alert) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಬೀರು ಒಳಗಡೆ ಇರುವ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು. ಮುಂದೇನು..? ಕಟ್ಕೋಬೇಕಲ್ವಾ ಬದುಕನ್ನ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ಯಿಂದ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಎಲ್ಲವನ್ನೂ ಮಾಡಿ ಕೊನೆಗೆ 2018 ರಲ್ಲಿ ಈ ಯೂಟ್ಯೂಬ್ ಒಳಗಡೆ ಧುಮುಕಿದೆ. ಆರಂಭದಲ್ಲಿ ಭಯಂಕರ ಅವಮಾನಗಳನ್ನ ಫೇಸ್ ಮಾಡ್ದೆ, ಕೈಯಲ್ಲಿ ದುಡ್ಡು ಇಲ್ಲದೇ ಬದುಕಿ ನಿಮಗೂ ಗೊತ್ತಾಗುತ್ತೆ. ಈ ಸಮಾಜ ಮರ್ಯಾದೆ ಕೊಡೋದು, ಭಯ ಬೀಳೋದು ದೊಡ್ಡವರಿಗೆ, ಇಲ್ಲ ದುಡ್ಡು ಇರೋವ್ರಿಗೆ ಮಾತ್ರ. ಹಾಗಾಂತ ನಾನು ರಾಕಿ ಬಾಯ್ ತರ ಸಾಹಸ ಮಾಡ್ಲಿಲ್ಲ ಬಿಡಿ. ಎಲ್ಲಿ ಕಳ್ಕೊಂಡಿದ್ನೋ ಅಲ್ಲಿಂದಲೇ ಶುರು ಮಾಡ್ದೆ. ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬ, ಇವತ್ತು ನನ್ನೊಟ್ಟಿಗೆ 5 ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ. ನನ್ ಜರ್ನಿ ನಡೀತಾನೇ ಇದೆ ಇರಲಿ ನಿಮ್ಮ ಆಶೀರ್ವಾದ ಹೀಗೆ.🙏 "ಕನ್ನಡ & ಅಮ್ಮ" ಅಂದ್ರೆ ಜೀವ, ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ👍🏻
ನನ್ನ ವಾಟ್ಸಾಪ್ ನಂ: 9844833844
ಧನ್ಯವಾದಗಳು ಇಷ್ಟೊತ್ತು ನಿಮ್ಮ ದೃಷ್ಟಿ ನನ್ಮೇಲೆ ಇಟ್ಟಿದ್ದಕ್ಕೆ 😄🙏- ನಿಮ್ಮ ಚಂದನ್ ❤️