MENU

Fun & Interesting

BHAVANA BELAGERE'S - HI BANGALORE!

BHAVANA BELAGERE'S - HI BANGALORE!

ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.

ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.

Enjoy & Stay connected with us...!!!
Subscribe to : youtube.com/user/Ravibelagere
Facebook : www.facebook.com/ravibelagere143
whatsapp : whatsapp.com/channel/0029Vb49...