ಸಂಗೀತ ವಿದ್ವಾನ್ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರು. ೧೦ ವರ್ಷಗಳ ಕಾಲ ಗುರುವಿನ ಸೇವೆಯ ಮಾಡುತ್ತಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ವ್ರತವೆಂಬಂತೆ ಮಾಡಿದವರು. ಗುರುವೊಲುಮೆ, ಅವರೇ ನನಗೆಗ್ ಸಕಲ ಎನ್ನುವ ಅಪಾರ ವಿಶ್ವಾಸವನ್ನು ಹೊಂದಿರುವ ವೆಂಕಟೇಶ್ ಎಸ್. ಅಲ್ಕೋಡ್ ರವರು ತರುಣರು. ಬಾಗಿ ನಡೆಯುವ, ಗುರುಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಪಾಲಿಸುವ ವ್ಯಕ್ತಿತ್ವ ಅವರ ಪ್ರತಿಭೆಗೆ ಮೆರುಗು ತಂದಿದೆ.
೧೧ ನೇ ವಯಸ್ಸಿನಲ್ಲಿರುವಾಗಲೆ ದಡ್ದಪ್ಪನವರಾದ ಪ್ರಭಯ್ಯನವರು ವೀರೇಶ್ವರ ಪುಣ್ಯಾಶ್ರಮ ಗದಗ್ ಇಲ್ಲಿಗೆ ಕರೆತಂದು ಶ್ರೀ ಶ್ರೀ ಶ್ರೀ ಪಂ. ಪುಟ್ಟರಾಜ ಕವಿ ಗವಾಯಿಗಳ ಬಳಿ ಬಿಟ್ಟು, ಇದುವೇ ನಿನಗೆ ಮನೆ ಮಠ ಎಂದು ಹೇಳಿ ಗುರುಗಳ ಸೇವೆಮಾಡಿಕೊಂಡು ಸಂಗೀತ ಕಲಿತುಕೊಂಡು ಬಾ ಎಂದು ಹೋದರು. ಅಲ್ಲಿಂದ ಎಂಟು ವರ್ಷಗಳ ಕಾಲ ಗುರುಗಳ ಸೇವೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡು ಸಂಗೀತವೇ ಜೀವನದ ಉಸಿರು ಎಂಬಂತೆ, ಪ್ರಾತವಾಗಿಸಿಕೊಂಡು ಕಲಿಕೆಯಲ್ಲಿ ದಿನಗಳೆದದ್ದು. ಆಮೇಲೆ ೪ ವರ್ಷಗಳ ಕಾಲ ಗುರುಗಳ ಬಳಿ ಕಲಿತದ್ದು ಭಾಗ್ಯ. ಆ ದಿನಮಾನಗಳು ಜೀವನದಲ್ಲಿ ಮಹತ್ವವಾದದ್ದು, ಗುರುಗಳ ಸಾಮೀಷ್ಯ ಹಿತನುಡಿ, ಆ ಮಹಾ ಪಾಂಡಿತ್ಯದ ಗುರುವಿನ ಸೇವಾಭಾಗ್ಯವಿಂದ ಸಂಗೀತವಾಗಿ ನನ್ನ ಕೊರಳನ್ನು ಆವರಿಸಿದೆ. ಅದುವೇ ನನಗೆ ಗುರುವಿಂದ ಲಭ್ಯವಾದ ಆಶೀರ್ವಾದವೆಂದು ಭಾವಿಸಿದ್ದೇನೆ.