ವಿದ್ಯಾಕ್ಷೇತ್ರ ಸಂವಾದ ಸರಣಿಯ ಈ ಮೊದಲ ಕಂತಿನಲ್ಲಿ, ವೇಣುವಾದಕ ಹಾಗೂ ಅಚಾರ್ಯ ನಿರಂಜನ್ ಹೆಗ್ಡೆ ಅವರೊಂದಿಗೆ ವಿಶೇಷ ಸಂದರ್ಶನ.
ಈ ವಿಡಿಯೋದಲ್ಲಿ ಅವರು
- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
- ವೇಣು ವಾದನದ ಬಗ್ಗೆ
- ತಮ್ಮ ಕಲಿಕೆ ಮತ್ತು ಕಲಿಸುವ ಪಯಣದ ಬಗ್ಗೆ
- ಗುರು-ಶಿಷ್ಯ ಪರಂಪರೆಯ ಮಹತ್ವದ ಬಗ್ಗೆ ಮತ್ತು
- ವಿದ್ಯಾಕ್ಷೇತ್ರದಲ್ಲಿ ಮಕ್ಕಳಿಗೆ ಕೊಳಲುವಾದನ ಕಳಿಸುವುದು ಹೇಗೆ ತೃಪ್ತಿದಾಯಕವಾಗಿದೆ ಎಂಬುದರ ಬಗ್ಗೆ ಮಾತನಾಡುತ್ತಾರೆ.
ಈ ವಿದ್ಯಾಕ್ಷೇತ್ರ ಸಂವಾದ ಸರಣಿಯನ್ನು ತಪ್ಪದೇ ನೋಡಿ ಮತ್ತು ನಮ್ಮ ಚಾನೆಲ್‌ಗೆ ಸಬ್ಸ್ಕ್ರೈಬ್ ಮಾಡಿ. 🎶🙏
ಸ್ಥಳ : ಮೂಡಲ ಮನೆ (https://maps.app.goo.gl/XiszdcUnWcbQaCpX6)
ಶೀರ್ಷಿಕೆ ಹಿನ್ನೆಲೆ ಸಂಗೀತ : @fluteniranjan
ಅಧ್ಯಾಯಗಳು
00:00 : ನಿರಂಜನ್ ಹೆಗ್ಡೆ ಅವರ ಕಿರುಪರಿಚಯ
3:35 : ನಿಮ್ಮ ಬಾಲ್ಯದ ಯಾವುದಾದರೂ ಒಂದು ಸವಿನೆನಪು?
5:30 : ಗುರುಶಿಷ್ಯ ಪರಂಪರೆ ಎಂದರೇನು? ನಿಮ್ಮ ಜೀವನದಲ್ಲಿ ನಿಮ್ಮ ಗುರುಗಳ ಪ್ರಭಾವ ಯಾವ ರೀತಿಯದಾಗಿತ್ತು?
9:32 : ನಿಮ್ಮ ಸಾಧನೆಗಾಗಿ ಅಥವಾ ಅಭ್ಯಾಸಕ್ಕಾಗಿ ಎಷ್ಟು ಸಮಯ ನಿಗದಿ ಪಡಿಸಬೇಕು?
12:08 : ಕೊಳಲಿನ ಇತಿಹಾಸ ಏನು? ಇದು ಹೇಗೆ ಸೃಷ್ಟಿ ಆಯಿತು?
14:52 : ವಿವಿಧ ಕೊಳಲುಗಳಲ್ಲಿರುವ ವ್ಯತ್ಯಾಸವೇನು?
16:29 : ಒಂದು ಚಿಕ್ಕ ನಿದರ್ಶನ
17:36 : ವೇಣು ವಾದನದಲ್ಲಿ ಘರಾಣೆಗಳು ಇವೆಯೇ? ಇದ್ದರೆ ಅವು ಯಾವುವು?
20:43 : ಶ್ರೇಷ್ಠ ಕಲಾವಿದರ ಪರಿಚಯ ಏನು?
24:27 : ಕೊಳಲು ನುಡಿಸುತ್ತ ನಿಮಗಾಗಿರುವ ಮರೆಯಲಾರದಂತಹ ಒಂದು ಸನ್ನಿವೇಶ ಯಾವುದಾದರೂ ಇದೆಯೇ?
25:10 : ನಿಮಗೆ ಅತ್ಯಂತ ಪ್ರಿಯವಾದ ರಾಗ ಯಾವುದಾದರೂ ಇದೆಯಾ?
26:01 : ಶಾಸ್ತ್ರೀಯ ಸಂಗೀತದ ಶುದ್ಧತೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬಹುದು? ಪಾಶ್ಚತ್ಯದ ಪ್ರಭಾವವನ್ನು ಹೇಗೆ ತಡೆಗಟ್ಟುವುದು?
31:04 : ಮಕ್ಕಳಿಗೆ (ಪ್ರತ್ಯೇಕವಾಗಿ ವಿದ್ಯಾಕ್ಷೇತ್ರದ ಮಕ್ಕಳಿಗೆ) ಗುರುಶಿಷ್ಯ ಪರಂಪರೆಯಲ್ಲಿ ಕೊಳಲುವಾದನ ಹೇಳಿಕೊಡುವ ಅನುಭವ ಹೇಗಿದೆ?
35:51 : ಕೊನೆಯದಾಗಿ ನಿಮ್ಮ ಅನಿಸಿಕೆಗಳು
ನಮಸ್ತೆ, ನಾವು ವಿದ್ಯಾಕ್ಷೇತ್ರ, ಕರ್ನಾಟಕದ ಬೆಂಗಳೂರಿನಲ್ಲಿರುವ ಗುರುಕುಲ. ನಮ್ಮ ಯೂಟ್ಯೂಬ್ ಚಾನೆಲ್‌ಗೆ ಆತ್ಮೀಯ ಸ್ವಾಗತ. ಭಾರತದಲ್ಲಿ ಗುರುಕುಲವಾಗಿ, ನಾವು ಭಾರತದ ಅಡಿಪಾಯವಾದ ಸಮಗ್ರ ಶಿಕ್ಷಣ ವ್ಯವಸ್ಥೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಪಠ್ಯಕ್ರಮವನ್ನು ಶಿಕ್ಷಣದ ಪಂಚಕೋಶ ಸಿದ್ಧಾಂತ ಮತ್ತು ಭಾರತೀಯ ಜೀವನ ದೃಷ್ಟಿಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಅವರು ತಮ್ಮ ಕಲಿಕೆಯಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ಎಲ್ಲಾ 5 ಕೋಶಗಳು ಪೋಷಿಸಲ್ಪಡುತ್ತವೆ. ಗುರುಕುಲಗಳು ನಮ್ಮನ್ನು ಬದುಕಲು ಸಜ್ಜುಗೊಳಿಸಿದ್ದವು. ದುರದೃಷ್ಟವಶಾತ್, ವಿದೇಶಿ ದೊರೆಗಳ ದೀರ್ಘಾವಧಿಯ ಪ್ರಭಾವದಿಂದ ನಾವು ಆ ಎಲ್ಲ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಸಹ-ಸಂಸ್ಥಾಪಕರಾದ ಶ್ರೀಮತಿ ಪ್ರೀತಿ ಧೀಮಾನ್ ಮತ್ತು ಶ್ರೀ ಬಿಸ್ವಾಕ್ಸೇನ್ ಪಾತ್ರರೊಂದಿಗೆ ಭವ್ಯ ಭಾರತದ ಅಡಿಪಾಯವನ್ನು ನಿರ್ಮಿಸಿದ ಸಂಸ್ಕೃತಿ-ಸಮೃದ್ಧ ಶಿಕ್ಷಣವನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯೊಂದಿಗೆ ನಮ್ಮ ಸಂಸ್ಥಾಪಕ ಮತ್ತು ಕುಲಪತಿ ಶ್ರೀ ಮುನೀತ್ ಧೀಮಾನ್ ಈ ಗುರುಕುಲವನ್ನು ಪ್ರಾರಂಭಿಸಿದರು.
ಪ್ರಸ್ತುತ, ನಾವು 100 ಕುಟುಂಬಗಳ ಪ್ರಬಲ ಸಮುದಾಯವಾಗಿದ್ದೇವೆ.
ನಮ್ಮದೇ ಭವಿಷ್ಯಕ್ಕಾಗಿ ಈ ವ್ಯವಸ್ಥೆಯನ್ನು ನಿರ್ಮಿಸಲು ನಮ್ಮ ಸಮುದಾಯಕ್ಕೆ ಹೆಚ್ಚು ಹೆಚ್ಚು ಜನರು ಸೇರಬೇಕೆಂದು ನಾವು ಬಯಸುತ್ತೇವೆ. ನಮ್ಮ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.vidyakshetra.org ಗೆ ಭೇಟಿ ನೀಡಿ.
#ವಿದ್ಯಾಕ್ಷೇತ್ರ #ಸಂವಾದ #ಬಾಸುರಿ #ಅಚಾರ್ಯ #ಗುರುಶಿಷ್ಯಪರಂಪರೆ #ಕನ್ನಡಸಂಸ್ಕೃತಿ #ಸಂಗೀತ