MENU

Fun & Interesting

Vijay Karnataka Live : ದರ್ಶನ್‌ ಅಭಿನಯದ ʼಡೆವಿಲ್‌ʼ ಶೂಟಿಂಗ್‌ ಶುರು, ಹೈ ಸೆಕ್ಯುರಿಟಿ ನೋಡಿ ಎಲ್ಲರೂ ಶಾಕ್!

Video Not Working? Fix It Now

ರೇಣಕಾಸ್ವಾಮಿಯ ಪ್ರಕರಂದಿಂದ ಜಾಮೀನು ಪಡೆದಿಕೊಂಡಿರೋ ನಟ ದರ್ಶನ್‌ ಮತ್ತೆ ಶೂಟಿಂಗ್‌ಗೆ ಮರಳಿದ್ದಾರೆ. ಪ್ರಕರಣದ ಕಾರಣದಿಂದ ಡೆವಿಲ್‌ ಶೂಟಿಂಗ್‌ ಸ್ಥಗಿತಗೊಂಡಿತ್ತು. ಮತ್ತೆ ಈದೀಗ ಡೆವಿಲ್‌ ಶೂಟಿಂಗ್‌ ಮೈಸೂರಿನಲ್ಲಿ ಆರಂಭಗೊಂಡಿದೆ. ಮಾರ್ಚ್‌ 12ರಿಂದ ಮಾರ್ಚ್‌ 15ರ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಮಾ.12ರಿಂದ ಮಾ.14 ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಚಿತ್ರತಂಡ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲು ತೀರ್ಮಾನಿಸಿದ್ದು ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಶೂಟಿಂಗ್ ಮಾಡಲ ಸಿನಿಮಾ ತಂಡ ನಿರ್ಧರಿಸಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಂಡಿರೋ ತಂಡಕ್ಕೆ, ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಅವರಿಂದ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿ ಕಾರ್ಯ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರೇಣುಕಾಸ್ವಾಮಿ ಹ*ತ್ಯೆ ಪ್ರಕರಣದಲ್ಲಿ ನೆನಗುದಿಗೆ ಬಿದ್ದಿದ್ದ ಡಿ ಡೆವಿಲ್‌ ಸಿನಿಮಾ ಶೂಟಿಂಗ್‌ ಮತ್ತೆ ಆರಂಭಗೊಂಡಿದೆ.

Comment