MENU

Fun & Interesting

#ವಚನ ದರ್ಶನ ಮಿಥ್ಯV/Sಸತ್ಯ ಪುಸ್ಕಕ ಬಿಡುಗಡೆಗೊಂಡ ಸಮಾರಭದ ಕ್ಷಣ 27/2/25ರಂದು ಶರಣ ಬಸವರಾಜ ಹೊರಟ್ಟಿ ಮಾನ್ಯ ಸಭಾಪತಿ

Video Not Working? Fix It Now

ಇಂದು ಬೆಂಗಳೂರಿನಲ್ಲಿ ನಡೆದ ವಚನ" ದರ್ಶನದ ಸತ್ಯ ಮಿತ್ಯ " ಎಂಬ ಕೃತಿ ಬಿಡುಗಡೆಯ ಅಭೂತ ಪೂರ್ವ ಸಂಧರ್ಭದಲ್ಲಿ ಮಾನ್ಯ ಬಿದರಿ ಸಾಹೇಬರ ಮಾತುಗಳು ಅದ್ಬುತವಾಗಿದ್ದವು. ಜಂಗಮರಿಂದ ಹಿಡಿದು ಮಾದಿಗರವರೆಗೂ ನಾವೆಲ್ಲ ಒಂದಾಗಬೇಕೆಂಬ ಅವರ ಕೂಗು ನಿಜಕ್ಕೂ ಇಂದಿನ ಸಾಂಸ್ಕೃತಿಕ ದಬ್ಬಾಳಿಕೆಯ ಕಾಲಘಟ್ಟದಲ್ಲಿ ಅತಿ ಪ್ರಸ್ತುತವು ಸಹ. ಆದರೆ ಅವರು ಮಾತಾಡುತ್ತಾ ವೀರಶೈವ ಭಾಂಧವರನ್ನು ಒಗ್ಗೂಡಿಸುಕೊಂಡು ಇಂದು ಎಲ್ಲಾ ಬಸವತತ್ವ ಅನುಯಾಯಿಗಳು ಹೋಗಬೇಕೆಂದು ಯಾಕೆ ಹೇಳಿದರು? ಎನ್ನುವುದು ನನಗೆ ಯಕ್ಷ ಪ್ರಶ್ನೆಯಾಗಿ ಕಾಡಿತು. ಇವ ನಮ್ಮವ ಎನ್ನುವ ಸಂಸ್ಕೃತಿಯ ಲಿಂಗಾಯತರು ಅವರನ್ನು ಎಂದೂ ಕಡೆಗಾಣಿಸಿಲ್ಲ. ಇಂದಿಗೂ ಬಹುತೇಕ ಲಿಂಗಾಯತರ ಎಲ್ಲಾ ಕಾರ್ಯಕ್ರಮಗಳು ಅವರೆ ಗುರುವಿನ ಸ್ಥಾನವಹಿಸಿ ನೆಡಿಸಿಕೊಡುತ್ತಾರೆ, ಹೀಗಿದ್ದು ಅವರನ್ನು ಲಿಂಗಾಯತದಿಂದ ಭಿನ್ನ ಎಂದೂ ತಾವು ಹೇಳುವುದಾದರು ಯಾಕೆ ? ವೀರಶೈವ ಭಾಂಧವರಿಗೆ ಬಸವಣ್ಣ ಬಿಟ್ಟು ಬದುಕಲು ಆಗಲ್ಲ. ತಾವೆ ಹೇಳಿದಂತೆ, ಶ್ರೇಷ್ಠರು ಅನಿಸಿಕೊಳ್ಳಬೇಕೆಂಬ ತವಕದಲ್ಲಿ ಎಡವಟ್ಟು ಆಗಿದೆ ಅಂತ. ಬಸವಣ್ಣನ ಲಿಂಗಾಯತ ಕೀಳಾಗಿ ತನ್ನ ಅಸ್ಮೀತೆಯನ್ನು ಉಳಿಸಿಕೊಂಡ ಪರಂಪರೆ ನಮಗೆ, ಶ್ರೇಷ್ಠತೆ ಬೇಡ ಸಮಾನತೆ ಬೇಕು. ಬಸವಣ್ಣನ ಸಮಾನತೆ ಒಪ್ಪಿ ಬಂದರೆ ಸಾಕು. ಅವರು ಲಿಂಗಾಯತರಿಗೆ ಭಿನ್ನರಲ್ಲ. ಅವರು ಎಂದಿಗೂ ನಮ್ಮ ಕುಲಬಾಂಧವರು. ವೀರಶೈವರನ್ನು ವೀರಮಾಹೇಶ್ವರರು ಎಂದು ಸಂಭೋದಿಸಲಾಗುವುದು. ವೀರಮಾಹೇಶ್ವರರು ಅಂದ್ರೆ ಲಿಂಗಾಯತ ಧರ್ಮದ ಗೋತ್ರವಾದ ಮಾದರ ಚೆನ್ನಯ್ಯ ಪರಂಪರೆಯವರು. ಹಾಗಾಗಿ ಮಾದರ ಚೆನ್ನಯ್ಯನ ಹೊರಗಿಟ್ಟರೆ ಲಿಂಗಾಯತ ಅಪೂರ್ಣ. ಹಾಗಾಗಿ ಇಂದಿನ ವೀರಶೈವ ಬಾಂಧವರು ಬಸವಣ್ಣನನ್ನು ಒಪ್ಪಿ ಅಪ್ಪಿ ಬಂದರೆ ಇಂದಿನ ಯಾವ ಲಿಂಗಾಯತನು ವಿರೋಧಿಸುವುದಿಲ್ಲ . ಇದು ಸತ್ಯ ಸಹ. ಇನ್ನೂ ತಾವುಗಳು ಮಾತಾನಾಡುತ್ತಾ ಹೇಳಿದ ವಿಷಯಗಳು ತುಂಬಾ ಅರ್ಥಪೂರ್ಣವಾಗಿದ್ದವು, ಆದರೆ ನನಗೆ ಕೆಲವು ಸಂದೇಹಗಳು ಅವು ಕೆಳಗಿನಂತೆ ಇವೆ ಈ ಸಂದೇಹಗಳಿಗೆ ತಾವು ಪರಿಹಾರ ತಿಳಿಸಿ: 1) ಪಂಚಾಚಾರ್ಯ ಆದಿಯಾಗಿ ಎಲ್ಲಾ ವೀರಶೈವ ಮಠಗಳು ಗುರು ಬಸವಣ್ಣನನ್ನು ಧರ್ಮ ಗುರುವೆಂದು ಒಪ್ಪಿಕೊಳ್ಳಬೇಕು. 2) ಅವರ ಮಠಗಳಲ್ಲಿ ಯಾವುದೇ ವೈದಿಕ ಆಚರಣೆಗಳ ಇರಬಾರದು ಮತ್ತು ಮಠದಲ್ಲಿ ಯಾವುದೇ ವೈದಿಕ ದೇವರುಗಳ ಭಾವ ಚಿತ್ರ ಬಿಟ್ಟು ಮಠದ ತುಂಬೆಲ್ಲಾ ಶರಣರ ಭಾವ ಚಿತ್ರಗಳು ಇರಬೇಕು. 3) ಮಠದಲ್ಲಿ ವೈದಿಕ ಸಂಸ್ಕೃತ ಮಂತ್ರಗಳು ಹೇಳುವುದು ಬಿಟ್ಟು ಅಲ್ಲಿ ವಚನಗಳೆ ಮೊಳಗುತ್ತಿರಬೇಕು. 4) ಇಂದು ಹುಟ್ಟಿನಿಂದ ಸಾವಿನವರೆಗಿನ ಮದುವೆ, ಮುಂಜಿ ಎಲ್ಲಾ ಆಚರಣೆಗಳನ್ನುವೀರಶೈವ ಬಾಂಧವರೆ ಮಾಡುವವರು. ಆ ಎಲ್ಲಾ ಆಚರಣೆಗಳಲ್ಲಿ ವೇದ, ಆಗಮ, ಶಾಸ್ತ್ರಗಳ ಹೇಳದೆ, ಅಚ್ಚ ಕನ್ನಡದ ವಚನಗಳಲ್ಲಿಯೆ ನಿಜಾಚರಣೆಗಳನ್ನು ಮಾಡಬೇಕು. 5) ವೈದಿಕದ ಕರ್ಮಾರಣೆಗಳನ್ನು ಬಿಟ್ಟು, ವಚನಗಳ ಆಚರಣೆಗಳನ್ನು ಪಾಲಿಸುವಂತೆ ಆಗಬೇಕು. 6) ಮನುಷ್ಯ ವಿರೋಧಿಯಾದ ಅಡ್ಡಪಲ್ಲಕ್ಕಿಯನ್ನು ಧಿಕ್ಕರಿಸಿ, ಮಾನವ ಸಹಜವಾದ ಪಾದಯಾತ್ರೆಗಳನ್ನು ಹಮ್ಮಿಕೊಳ್ಳಬೇಕು. 7) ಶ್ರೇಷ್ಠದ ವ್ಯಸನದಂತಿರುವ ವೇದಿಕೆಯ ಮೇಲೆ ತಮ್ಮ ಆಸನವನ್ನು ಹೆಚ್ಚಿಸುವಂತ ಪರಿಪಾಠ ಬಿಟ್ಟು ಅನುಭುವ ಮಂಟಪ ಸಂಕೇತವಾದ ಸಮಾನತೆಯ ಆಸನಗಳನ್ನು ವೇದಿಕೆಯ ಮೇಲೆ ಒಪ್ಪುವಂತಿರಬೇಕು. ಇಷ್ಟು ಒಪ್ಪಿ ಅವರು ಬಸವಣ್ಣನ ಲಿಂಗಾಯತವನ್ನು ಒಪ್ಪಿಕೊಂಡರೆ ಸಾಕು. ಇದಕ್ಕಿಂತ ಹೆಚ್ಚಾಗಿ ಯಾವ ಲಿಂಗಾಯತನು ಅವರಿಂದ ಏನೂ ಬಯಸೊಲ್ಲ. ತಮ್ಮ ನೇತೃತ್ವದಲ್ಲಿ ಇಂತಹದೊಂದು ಅದ್ಬುತವಾದ ಒಳಗೊಳ್ಳುವಿಕೆ ಆ ಸಮುದಾಯದಿಂದ ಆದರೆ ಸಾಕು. ಅದಕ್ಕೆ ತಾವುಗಳು ಶ್ರಮಪಟ್ಟು ಜಂಗಮ ಮೊದಲಾಗಿ ಮಾದಿಗ ಕಡೆಯಾಗಿ ಲಿಂಗಭಕ್ತರೆಲ್ಲಾ ಒಂದೆ ಎನ್ನುವ ಶರಣ ಆಸೆ ಇಡೇರುವಂತೆ ಆಗಲಿ. ಶರಣು ಶರಣಾರ್ಥಿಗಳು. ಡಾ.ರಾಜಶೇಖರ ನಾರನಾಳ

Comment