MENU

Fun & Interesting

ತೋಟಕ್ಕೆ ಅಡಿಕೆ ಸಿಪ್ಪೆ,ತೆಂಗಿನ ಮೊಟ್ಟೆ ನೇರವಾಗಿ ಕೊಡಬೇಡಿ।ನಿಮಗೆ ತೋಚಿದ್ದು,ಬಯಸಿದ್ದು,ಕೊಟ್ಟಿದ್ದೆಲ್ಲ ಗಿಡ ತಗೊಳಲ್ಲ

Vivara - ವಿವರ 18,992 lượt xem 1 week ago
Video Not Working? Fix It Now

Ep-10,ತೆಂಗಿನ ಹೆಡೆಯಲ್ಲಿದೆ 27% ಪೊಟ್ಯಶ್, 1ಕೆಜಿ ಕೋಕೋಪಿಟ್ 6 ಲೀಟರ್ ಹಿಡಿದಿಡುವ ಸಾಮರ್ಥ್ಯ ಹೊಂದಿದೆ.
ಹೀಗೆ ಹತ್ತು ಹಲವು ಸಂಕ್ಷಿಪ್ತ ಉತ್ತರಗಳು.
ಹೌದು ಸ್ನೇಹಿತರೆ ಹಿಂದಿನ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಸಾವಯವ ಗೊಬ್ಬರ ತಯಾರಿಕೆಯ ವೀಡಿಯೋ ನೋಡಿ ನಮ್ಮಲ್ಲಿ ಅಸಂಖ್ಯಾತ ರೈತರು ತಮ್ಮ ಕೆಲ ಪ್ರಶ್ನೆಗಳಿಗೆ ನೇರವಾಗಿ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರಿಂದ ಉತ್ತರವನ್ನು ಬಯಸಿದ್ರಿ ಆ ಪ್ರಶ್ನಾವಳಿಗಳ ಮುಂದುವರಿಕೆ ಈ ಸಂಚಿಕೆ.
ಇನ್ನೂ ಅನೇಕ ಪ್ರಶ್ನಾವಳಿ ವಿಡಿಯೋ ಗಳು ನಿಮ್ಮ ಮುಂದೆ ಬರಲು ಕಾಯ್ತಿವೆ.
ಮೊದಲಾಗಿ ಅನೇಕರು ಖುದ್ದಾಗಿ ಡಾ. ಹೆಗ್ಡೆ ಯವರನ್ನು ಭೇಟಿ ಮಾಡಲು ಇಚ್ಚಿಸಿದ್ದೀರಿ ಅಂಥವರು ಹೆಗ್ಡೆ ಯವರ ಆರೋಗ್ಯ ದೃಷ್ಟಿಯಿಂದ ಆದಷ್ಟು ತಮ್ಮ ಭೇಟಿಯ ದಿನವನ್ನ ಆದಷ್ಟು ವಾರದ ಕೊನೆಯ ದಿನಗಳಾದ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಿ.
ಮೇಲಾಗಿ ಸಾವಯವ ಕೃಷಿಯಲ್ಲಿ ತೊಡಗುವವರಿಗೆ, ತೊಡಗಬೇಕು ಎನ್ನುವವರಿಗೆ ಡಾ. ಹೆಗ್ಡೆ ರವರ ವಿಡಿಯೋಗಳು ಸ್ಪೂರ್ತಿ ಆಗಬಲ್ಲದು ಎಂಬ ಆಶಯ ನಮ್ಮದು.
ಈ ನಾಲ್ಕನೇ ಪ್ರಶ್ನೋತ್ತರ ಸಂಚಿಕೆ ನಿಮಗೆ ಸಾಕಷ್ಟು ಮಾಹಿತಿ ಮತ್ತು ತಿಳುವಳಿಕೆಗೆ ಕಾರಣವಾಗಬಹುದೆಂದು ನಮ್ಮ ನಂಬಿಕೆ.
ಈ ಸಂಚಿಕೆಯಲ್ಲಿ ನಮ್ಮನ್ನು ಪ್ರತಿನಿಧಿಸಿ, ಡಾ| ವಿ.ಪಿ. ಹೆಗ್ಗಡೆಯವರಲ್ಲಿ ಪ್ರಶ್ನಿಸಿ, ಅವರಿಂದ ಅಮೂಲ್ಯ ಮಾಹಿತಿಯನ್ನು ಹೊರತೆಗೆದ ನಮ್ಮ ಕೃಷಿ ಮಾಸ್ತರ್ ಶ್ರೀ HR ಮಂಜುನಾಥ್ ಯವರಿಗೆ ಅಭಿನಂದನೆಗಳು.
ಎಂದಿನಂತೆ ತಾಳ್ಮೆಯಿಂದ ನಮ್ಮ ಸಂದೇಹಗಳನ್ನು ಗುರುತಿಸಿ, ನಮಗೆ ಮಾರ್ಗದರ್ಶನ ಮಾಡುತ್ತಿರುವ, ನಮ್ಮೊಡನಿರುವ ಹಿರಿಯ ವಿಜ್ಞಾನಿಗಳು, ಸಾವಯವ ಕೃಷಿ ಸಂತರಾದ ಡಾ| ವಿ.ಪಿ ಹೆಗ್ಗಡೆಯವರಿಗೆ ನಮ್ಮ ಕೃತಜ್ಞತಾ ಪೂರಕವಾದ ಪ್ರಣಾಮಗಳು.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

ಡಾ. VP ಹೆಗ್ಡೆ ರವರು ತಯಾರಿಸಿರುವ ಉತ್ಕೃಷ್ಟ ಮಟ್ಟದ ಸಾವಯವ ಗೊಬ್ಬರ, ಸಾವಯವ ರೋಗ ಕೀಟ ನಿಯಂತ್ರಕಗಳು ಹಾಗೂ ಟೆರೇಸ್ ಗಾರ್ಡನ್ ಗೆ ಸೂಪರ್ 18 ಗೊಬ್ಬರದ ಬಾಲ್ ಬೇಕಾದಲ್ಲಿ- ಸಂಪರ್ಕಿಸಿ - 98866 33355 ,76768 52842 (ವೈಟಲ್ ಪ್ಲಾಂಟ್ ಪ್ರಾಡಕ್ಟ್ ಹರಿಹಳ್ಳಿ)
ಧನ್ಯವಾದಗಳು.

#vivarainfo #farming #sustainablefarming #agriculture #vivaraorganics #natural #organic #organimanure #fertilizer #terracegarden #terracegardening #vphegde

Comment