ಕೂಲಿಗಾಗಿ ತೆಲಂಗಾಣದಿಂದ ಬಂದ ಕುಟುಂಬದ ಹಿರಿಯ ವ್ಯಕ್ತಿ ಕಾಣೆಯಾಗಿದ್ದರು. ಈ ಸಂಬಂಧವಾಗಿ ಅವರ ಪತ್ನಿ ಹಿರಿಯ ನಾಗರಿಕ ಮಹಿಳೆ ಲಾಯರ್ ಮೂಲಕ ಹೇಬಿಯಸ್ ಕಾರ್ಪಸ್ ಹಾಕಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಗಳಗಳನೆ ಅತ್ತ ಅಜ್ಜಿಯನ್ನು ಸಂತೈಸಿದ ನ್ಯಾಯಾಧೀಶರು ಅಮ್ಮಾ, ನೀವು ನ್ಯಾಯಾಲಯದಲ್ಲಿ ಅತ್ತರೆ ನಾವೂ ಅಳುತ್ತಾ ಕೂರಬೇಕಾಗುತ್ತದೆ. ಆಗ ಯಾವ ಕೇಸ್ ವಿಚಾರಣೆ ಆಗುವುದಿಲ್ಲ ಎಂದರು. ಆಕೆಯನ್ನು ನ್ಯಾಯಾಲಯ ಸಂಕೀರ್ಣದಲ್ಲಿ ಖಾಲಿಯಿರುವ ಕೊಠಡಿಯಲ್ಲಿ ಕೂರಿಸಿ ತಿಂಡಿ, ನೀರು ಕೊಟ್ಟು, ಸಮಾಧಾನ ಮಾಡಿ ಸಭ್ಯತೆಯಿಂದ ಮಾಹಿತಿ ಪಡೆಯಿರಿ. ಆಕೆ ಅಂಜಿ, ದುಃಖದಲ್ಲಿದ್ದಾರೆ ಎಂದು ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಸೂಚನೆ ನೀಡಿದರು. ಧಾರವಾಡ ಹೈಕೋರ್ಟ್ ಪೀಠದ ಇಂತಹ ನ್ಯಾಯಾಧೀಶರು ನಿಜಕ್ಕೂ ದೇವರೇ ಹೌದು...
#highcourtofkarnataka #judge #justice #dharwad #HCJudge #courtproceedings