ಸಾಣೇಹಳ್ಳಿ ಎಂಬ ಪುಟ್ಟ ಹಳ್ಳಿಗೆ ಜಾಗತಿಕ ಮನ್ನಣೆ
ಚಿತ್ರದುರ್ಗ ಜಿಲ್ಲೆಯ ಕೊನೆಯ ಪುಟ್ಟ ಹಳ್ಳಿ ಸಾಣೇಹಳ್ಳಿ ಜಾಗತಿಕ ಮನ್ನಣೆ ಪಡೆಯಲು ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಇಚ್ಛಾಶಕ್ತಿಯೇ ಕಾರಣ.
ಅವರು ಆರಂಭಿಸಿದ ಶಿವಕುಮಾರ ಕಲಾಬಳಗ ಇಂದು ನಾಡಿನ ಬಹುದೊಡ್ಡ ರಂಗ ತರಬೇತಿ ಶಾಲೆ. ನೂರಾರು ಪ್ರತಿಭಾ ಸಂಪನ್ನ ಕಲಾವಿದರು ಹೊರ ಹೊಮ್ಮಿದ್ದಾರೆ.
ಶಿವಸಂಚಾರ ತಿರುಗಾಟ ಇಡೀ ನಾಡನ್ನು ಸುತ್ತಿದೆ, ದೇಶ- ವಿದೇಶಗಳನ್ನೂ!
ಸ್ವತಃ ಸಾಹಿತಿಗಳು, ಕಲಾವಿದರು ಆಗಿರುವ ಪೂಜ್ಯರು ಸಮಯ ಪ್ರಜ್ಞಾ ಪರಿಪಾಲಕರು. ಅಪ್ಪಟ ಬಸವತತ್ವ ಸಿದ್ಧಾಂತಗಳನ್ನು ತಮ್ಮ ‘ಮತ್ತೆ ಕಲ್ಯಾಣ’ದ ಮೂಲಕ ತಲುಪಿಸಲು ಯಶ ಸಾಧಿಸಿದ್ದಾರೆ.
ಏಕದೇವೋಪಾಸನೆಯ ಬರಹಗಳು ವಿವಾದ ಹುಟ್ಟಿಸಿದರೂ, ಸೂಕ್ತ ಉತ್ತರ ನೀಡುವ ಬದ್ಧತೆ ಹೊಂದಿದ್ದಾರೆ. ಓದು-ಬರಹ-ಸಂಚಾರ ಸೂತ್ರದ ಮೂಲಕ ಜನಮಾನಸದಲ್ಲಿ ಜಾಗ್ರತೆ ಮೂಡಿಸಿದ್ದಾರೆ.
ವಚನ ಟಿವಿ ಜೊತೆಗೆ ತುಂಬಾ ಆಪ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಂಡು ನಮ್ಮನ್ನು ಪುಳಕಗೊಳಿಸಿದ್ದಾರೆ.
ದಯವಿಟ್ಟು ಅವರ ಗಂಭೀರ ಮಾತುಗಳ ಆಲಿಸಿ, ಇತರರೊಂದಿಗೆ ಹಂಚಿಕೊಳ್ಳಿ
#vachanatvkannada #Siddu_Yapalaparvi #sanehalli #vachanamediahouse #kannada