ಬಸವ ಧರ್ಮಪೀಠ ಕೂಡಲಸಂಗಮದ ಪೂಜ್ಯ ಶ್ರೀ ಡಾ. ಬಸವಪ್ರಕಾಶ ಸ್ವಾಮೀಜಿಗಳಿಗೆ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕಾಂತಶಿಲೆಗಳನ್ನು ಬಳಸಿ ವಿಶೇಷ ಲಿಂಗವನ್ನು ತಯಾರಿಸಿ ಕೊಡಲಾಯಿತು
ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ ಪೂಜ್ಯರು ಇಷ್ಟಲಿಂಗ ಶಿವಯೋಗ / ದೃಷ್ಟಿಯೋಗದ ಮಹತ್ವ ಕುರಿತಂತೆ ಅನೇಕ ವಿಚಾರಗಳನ್ನು ಚರ್ಚಿಸಿದರು. ಹಾಗೆಯೇ "ಇಷ್ಟಲಿಂಗ ಶಿವಯೋಗ / ದೃಷ್ಟಿಯೋಗ ಇಂದು ನಾಡಿನಾದ್ಯಂತ ಹಾಗೂ ವಿಶ್ವದಾದ್ಯಂತ ಪಸರಿಸುತ್ತಿರುವುದನ್ನು ಕಂಡು ತುಂಬಾ ಸಂತೋಷವಾಗಿದೆ. ಜೊತೆಗೆ ಎಂದೂ ಇಷ್ಟಲಿಂಗವನ್ನು ಕಟ್ಟದ, ಶಿವಯೋಗವನ್ನು ಆಚರಿಸದ, ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಗೌರವಿಸದ, ನಾಸ್ತಿಕ ಮನೋಭಾವನೆ ಹೊಂದಿರುವ, ಅನುಭಾವವೇ ಇಲ್ಲದ ಕೆಲವರು ಬುದ್ಧಿಜೀವಿಗಳೇನಿಸಿಕೊಂಡವರು ಅನೇಕ ವಿಚಾರಗಳಲ್ಲಿ ಸಮುದಾಯದ ಮುಂದಾಳತ್ವವನ್ನು ವಹಿಸಿಕೊಂಡು ತಮ್ಮ ಮನ ಬಂದಂತೆ ಭಾಷಣಗಳನ್ನು ಪ್ರವಚನಗಳನ್ನು ನೀಡುತ್ತಿದ್ದಾರೆ. ಇಂಥವರು ಧರ್ಮದ ಹೆಸರಿನಲ್ಲಿ, ಸ್ವ ಹಿತಾಸಕ್ತಿ ಸಾಧನೆಗಾಗಿ, ಜನರಲ್ಲಿ ಅನೇಕ ಗೊಂದಲಗಳನ್ನು ಸೃಷ್ಟಿ ಮಾಡಿ ಒಗ್ಗಟ್ಟು ಒಡೆಯುವ ಹುನ್ನಾರವಾಗುತ್ತಿದೆಯೇ? ಏನೂ!" ಎಂದು ಕಳವಳ ವ್ಯಕ್ತಪಡಿಸಿದರು.
#BenalmathKantiworks #IshtalingaManufacturer #IshtalingaShivayoga #ishtalinga #ಇಷ್ಟಲಿಂಗ #ಶಿವಯೋಗ www.tuppadakantilinga.com www.ishtalinga.in