MENU

Fun & Interesting

ಮಾತನಾಡುವ ಭಾಗವತರು ಕುರಿಯ ಗಣಪತಿ ಶಾಸ್ತ್ರಿಗಳು (Speaking Singer Kuriya Ganapati Shastri)

Video Not Working? Fix It Now

ಮಾತನಾಡುವ ಭಾಗವತರು, ಸಮರ್ಥ ರಂಗ ನಿರ್ದೇಶಕ ಕುರಿಯ ಗಣಪತಿ ಶಾಸ್ತ್ರಿಗಳು (Speaking Singer, efficient theater director Kuriya Ganapati Shastri)

http://yaksharangabykateelusitla.blogspot.in/2016/04/speaking-singer-efficient-actor.html - An article about Kuriya Ganapati Shastri in Kannada

ತೆಂಕುತಿಟ್ಟು ಯಕ್ಷಗಾನದ "ತವರು ಮನೆ" ಎನ್ನುವ ಸುವಿಖ್ಯಾತಿಯನ್ನು ಪಡೆದ ಕುರಿಯ ಮನೆತನದ ದೈತ್ಯ ಪ್ರತಿಭಾ ವಿಶೇಷದಿಂದ ಕೂಡಿದ್ದ ದೊಡ್ಡಪ್ಪ ದಿ| ಕುರಿಯ ವಿಠಲ ಶಾಸ್ತ್ರಿಗಳ ನೇತೃತ್ವದಲ್ಲಿ ಧರ್ಮಸ್ಥಳ ಮೇಳವು ಕುರಿಯ ಮನೆಯಲ್ಲಿಯೇ ನೆಲೆಸುತ್ತಿದ್ದ ಕಾಲದಲ್ಲಿ ದಿ| ಕುರಿಯ ವಿಠಲ ಶಾಸ್ತ್ರಿಗಳಿಂದ ತೆಂಕುತಿಟ್ಟು ಯಕ್ಷಗಾನದ ನಾಟ್ಯ ಮತ್ತು ಮಾತುಗಾರಿಕೆಯನ್ನು ತನ್ನ 9 ನೇ ತರಗತಿಯಲ್ಲಿರುವ ಸಮಯದಲ್ಲಿಯೇ ಕಲಿಯರಾರಂಭಿಸಿ, ಆ ತನ್ನ ಶಾಲಾ ದಿನಗಳಲ್ಲಿಯೇ ಮಹಿಷಾಸುರ, ಮಾಗಧ, ಕಂಸ ರಾವಣ, ಮೈರಾವಣ, ಕಾರ್ತವೀರ್ಯ, ಕಂಸ, ವೀರಭದ್ರ, ಪರಶುರಾಮ ಮುಂತಾದ ಪಾತ್ರಗಳನ್ನು ಮಾಡಿ ಸೈ ಎನ್ನಿಸಿಕೊಂಡವರು. ದಿ| ಪಾರೆಕೋಡಿ ಕೃಷ್ಣ ಭಟ್ಟರಿಂದ ತೆಂಕುತಿಟ್ಟು ಯಕ್ಷಗಾನದ ತಾಳವನ್ನೂ, ಶ್ರೀ ಬಾಯಾರು ಸುಬ್ರಾಯ ಭಟ್ಟರಿಂದ ಶೃತಿಜ್ಞಾನವನ್ನೂ ದಿ| ನಿಡ್ಲೆ ನರಸಿಂಹ ಭಟ್ಟರಿಂದ ಸಮಗ್ರ ರಂಗತಂತ್ರವನ್ನೂ ನಿಷ್ಠೆಯಿಂದ ಅಭ್ಯಾಸ ಮಾಡಿದವರು ಜತೆಯಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ ಮಾರ್ಗದರ್ಶನವನ್ನೂ ಪಡೆದುಕೊಂಡು ಬೆಳೆದರು.

ಯಕ್ಷಗಾನದ ಅಭಿಮಾನಿಯಾದ ಹಾಗೂ ಕುರಿಯ ಗಣಪತಿ ಶಾಸ್ತ್ರಿಗಳ ಅಭಿಮಾನಿಯಾಗಿರುವ ನಾನು ನನ್ನ ಅಭಿನಂದನೆಯನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.

ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.

ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.

Comment